Sainik school | ಸೈನಿಕ ಶಾಲೆಯ ಪ್ರವೇಶಕ್ಕೆ ಅರ್ಜಿ ಆಹ್ವಾನ | ವಿವಿಧ ಸೌಲಭ್ಯಕ್ಕೆ ಅವಧಿ ವಿಸ್ತರಣೆ | ಮ್ಯಾನೇಜ್‍ಮೆಂಟ್ ತರಬೇತಿ‌ ಅವಕಾಶ

FATA FAT NEWS 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೊಡಗು ಸೈನಿಕ ಶಾಲೆಯಲ್ಲಿ 6 ಮತ್ತು 9ನೇ ತರಗತಿಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು https://exams.nta.ac.in/AISSEE ಜಾಲತಾಣದಲ್ಲಿ ಡಿ.16 ರೊಳಗೆ ಸಲ್ಲಿಸಬಹುದಾಗಿದೆ. ಲಿಖಿತ ಪರೀಕ್ಷೆಯನ್ನು ಜ.21 ರಂದು ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ www.sainikschoolkodagu.edu.in  ಜಾಲತಾಣವನ್ನು ಸಂಪರ್ಕಿಸಬಹುದೆಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರಾದ ಡಾ.ಸಿ.ಎ ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

READ |  ತುಂಗಾ ನದಿಯ ನೀರಿನಲ್ಲಿ ಅಲ್ಯೂಮಿನಿಯಂ ಅಂಶ ಪತ್ತೆ, ಸಂಶೋಧನೆಗೆ ಕಾಲ ನಿಗದಿ

ಅವಧಿ ವಿಸ್ತರಣೆ

SHIMOGA: ಜಿಲ್ಲಾ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗಳು 2023-24ನೇ ಸಾಲಿನಲ್ಲಿ ನೇರಸಾಲ, ಗಂಗಾ ಕಲ್ಯಾಣ ಯೋಜನೆ ಹಾಗೂ ಭೂ ಒಡೆತನ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ದಿನಾಂಕವನ್ನು ಡಿ. 15ರವರೆಗೆ ವಿಸ್ತರಿಸಲಾಗಿದೆ.
ಆಸಕ್ತ ಅರ್ಹ ಫಲಾಪೇಕ್ಷಿಗಳು ಶಿವಮೊಗ್ಗ ಒನ್, ಗ್ರಾಮ ಒನ್, ಕರ್ನಾಟಕ ಒನ್, ಸೇವಾ ಸಿಂಧು ಪೋರ್ಟಲ್‍ನಲ್ಲಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ರಂಗನಾಥ ನಿಲಯ, ಗಾಂಧಿನಗರ, 6ನೇ ತಿರುವು, ಎ ಬ್ಲಾಕ್, ಶಿವಮೊಗ್ಗ, ದೂ.ಸಂ.: 08182-224349ನ್ನು ಸಂಪರ್ಕಿಸುವುದು.

ಮ್ಯಾನೇಜ್‍ಮೆಂಟ್ ತರಬೇತಿಗಾಗಿ ಅರ್ಜಿ ಆಹ್ವಾನ

SHIMOGA: ಶಿವಮೊಗ್ಗದ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿ ಸಂಸ್ಥೆಯಲ್ಲಿ 2024ನೇ ಜನವರಿಯಿಂದ ಆರು ತಿಂಗಳ ರೆಗ್ಯುಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಯನ್ನು ಆಯೋಜಿಸಿದ್ದು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಅಭ್ಯರ್ಥಿಗಳಿಂದ ಹಾಗೂ ಸಹಕಾರ ಸಂಘ/ಬ್ಯಾಂಕ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಂದ ಅರ್ಜಿ ಆಹ್ವಾನಿಸಿದೆ.
ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಮಾಸಿಕ ₹500 ಹಾಗೂ ವಿಶೇಷ ತರಬೇತಿ ಅನ್ವಯ 30 ವರ್ಷದೊಳಗಿನ ಪ.ಜಾತಿ/ಪ.ಪಂ.ದ ಅಭ್ಯರ್ಥಿಗಳಿಗೆ ಮಾಸಿಕ ₹600 ಶಿಷ್ಯವೇತನ ನೀಡಲಾಗುವುದು.
ಆಸಕ್ತರು ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್, ವಿನೋಬನಗರ, ಶಿವಮೊಗ್ಗ ಇಲ್ಲಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಡಿ. 15 ರೊಳಗಾಗಿ ಸಲ್ಲಿಸುವಂತೆ ಇನ್‍ಸ್ಟಿಟ್ಯೂಟ್ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-248873/ 7022429440 ಗಳನ್ನು ಸಂಪರ್ಕಿಸುವುದು.

error: Content is protected !!