Arrest | ಬೈಕ್‌ ಥೆಫ್ಟ್ ಗ್ಯಾಂಗ್ ಅರೆಸ್ಟ್, ಬರೋಬ್ಬರಿ‌ ₹5.20 ಲಕ್ಷ ಮೌಲ್ಯದ ಬೈಕ್ ಗಳು ಸೀಜ್

Bike Theft

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬೈಕ್ ಕಳವು ಮಾಡುತ್ತಿದ್ದ ಗ್ಯಾಂಗ್ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಅಂದಾಜು ₹5.20 ಲಕ್ಷ ಮೌಲ್ಯದ 14 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

READ |  ಜನವರಿಯಲ್ಲಿ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ನಿತಿನ್ ಗಡ್ಕರಿ, ಯಾವೆಲ್ಲ‌ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ?

ಇಬ್ಬರ ಬಂಧನ, 14 ಬೈಕ್ ವಶಕ್ಕೆ ಪಡೆದ ಖಾಕಿ
ಡಿ. 16ರಂದು ನ್ಯೂ ಟೌನ್ ಪೊಲೀಸ್ ಠಾಣೆ ಪ್ರಕರಣದಲ್ಲಿ ದ್ವಿಚಕ್ರ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಭದ್ರಾವತಿಯ ಸಿದ್ದಾಫುರ ಹೊಸೂರಿನ‌ ಅಬ್ದುಲ್ ಕರೀಂ ಅಲಿಯಾಸಗ ಕರೀಂ ಅಲಿಯಾಸ್ ಮನ್ನಾ(27) ಮತ್ತು ಅರ್ಷೀಲ್ ಪಾಷಾ ಅಲಿಯಾಸ್ ಹರ್ಷೀಲ್(34) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿತರಿಂದ ನ್ಯೂಟೌನ್ ಪೊಲೀಸ್ ಠಾಣೆಯ 7, ಹೊಸಮನೆ ಪೊಲೀಸ್ ಠಾಣೆಯ 2, ಪೇಪರ್ ಟೌನ್ ಪೊಲೀಸ್ ಠಾಣೆಯ 1, ದೊಡ್ಡಪೇಟೆ ಪೊಲೀಸ್ ಠಾಣೆಯ 1, ತರೀಕೆರೆ ಪೊಲೀಸ್ ಠಾಣೆಗೆ ಸೇರಿದ 1 ಪ್ರಕರಣ ಸೇರಿ ಒಟ್ಟು 12 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂದಿಸಿದ 12 ಬೈಕ್ ಗಳು ಹಾಗೂ ಕೃತ್ಯಕ್ಕೆ ಬಳಸಲಾದ 2 ಬೈಕ್ ಗಳು ಸೇರಿ ಅಂದಾಜು ಮೌಲ್ಯ ₹5,20,000 ಮೌಲ್ಯದ 14 ಬೈಕ್ ಗಳನ್ನು ವಶಕ್ಕೆ‌ ಪಡೆಯಲಾಗಿದೆ.
ತಂಡದ ಕಾರ್ಯಕ್ಕೆ ಶ್ಲಾಘನೆ
ಭದ್ರಾವತಿಯಲ್ಲಿ ವರದಿಯಾದ ವಾಹನ ಕಳವು ಪ್ರಕರಣಗಳಲ್ಲಿ ಆರೋಪಿ ಮತ್ತು ಕಳುವಾದ ಬೈಕ್ ಗಳ ಪತ್ತೆಗಾಗಿ ಎಸ್.ಪಿ‌ ಮಿಥುನ್ ಕುಮಾರ್, ಹೆಚ್ಚುವರಿ ಎಸ್.ಪಿ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ ಭದ್ರಾವತಿ ಡಿವೈಎಸ್.ಪಿ ನಾಗರಾಜ ಮೇಲ್ವಿಚಾರಣೆಯಲ್ಲಿ ನಗರ ವೃತ್ತದ ಸಿಪಿಐ ಶ್ರೀಶೈಲ್ ಕುಮಾರ್, ಗ್ರಾಮಾಂತರ ಪೊಲೀಸ್ ಠಾಣೆ ಪಿಐ ಜಗದೀಶ್ ಹಂಚಿನಾಳ್, ಪೇಪರ್ ಟೌನ್ ಠಾಣೆ ಪಿಐ ನಾಗಮ್ಮ, ಹೊಳೆಹೊನ್ನೂರು ಪೊಲೀಸ್ ಠಾಣೆ ಪಿಐ ಲಕ್ಷ್ಮಿಪತಿ ನೇತೃತ್ವದಲ್ಲಿ ಪಿಎಸ್.ಐಗಳಾದ ಸುರೇಶ್, ರಮೇಶ್, ಚಂದ್ರಶೇಖರ್ ಇನ್ನಿತರ ಸಿಬ್ಬಂದಿ ಕಾರ್ಯಚರಣೆ ಕೈಗೊಂಡಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಿದ್ದಕ್ಕೆ ಎಸ್.ಪಿ ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.

error: Content is protected !!