Jobs in court | ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

JOB FIND

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಪ್ರೊಸೆಸ್ ಜಾರಿಕಾರ (ಪ್ರೊಸೆಸ್ ಸರ್ವರ್) ಹಾಗೂ ಜವಾನ (ಪ್ಯೂನ್) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರೊಸೆಸ್ ಜಾರಿಕಾರ 5 ಹುದ್ದೆಗಳು ಹಾಗೂ ಜವಾನ 28 ಹುದ್ದೆಗಳು ಖಾಲಿ ಇದ್ದು ಅರ್ಜಿಗಳನ್ನು ಜಿಲ್ಲಾ ನ್ಯಾಯಾಲಯದ ವೆಬ್‍ಸೈಟ್ https://shivamogga.dcourts.gov.in/notice-category/recruitments ಅಥವಾ https://karnatakajudiciary.kar.nic.in/districtrecruitment.php ಇಲ್ಲಿ ಆನ್‍ಲೈನ್ ಮೂಲಕ ದಿ: ಡಿ.15 ರಿಂದ ಜನವರಿ 16ರ ರಾತ್ರಿ 11.59 ರವರೆಗೆ ಸಲ್ಲಿಸಬಹುದು.

READ |  ಪಿಎಚ್.ಸಿನಲ್ಲಿ‌ ಹುದ್ದೆಗಳು ಖಾಲಿ, ಭರ್ತಿಗೆ ಅರ್ಜಿ ಆಹ್ವಾನ, ಕೂಡಲೇ ಅರ್ಜಿ ಸಲ್ಲಿಸಿ

ಹೊಂದಿರಬೇಕಾದ ಅರ್ಹತೆಗಳು
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ನಡೆಸುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ ಕನಿಷ್ಠ 18 ತುಂಬಿರಬೇಕು ಗರಿಷ್ಠ ಸಾಮಾನ್ಯ ವರ್ಗ 35 ವರ್ಷ, 2ಎ, 2ಬಿ, 3ಎ, 3ಬಿ 38 ವರ್ಷಗಳು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1 ಕ್ಕೆ 40 ವರ್ಷ ಇರಬೇಕು.
ಶುಲ್ಕ ಸಾಮಾನ್ಯ ವರ್ಗಕ್ಕೆ ₹200, 2ಎ, 2ಬಿ, 3ಎ, 3ಬಿ ಗೆ ₹100 ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1 ಶುಲ್ಕ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

error: Content is protected !!