Parking zone | ಶಿವಮೊಗ್ಗದಲ್ಲಿ ಬೈಕ್, ಕಾರು ಪಾರ್ಕಿಂಗ್, ನಾನ್ ಪಾರ್ಕಿಂಗ್ ಝೋನ್, ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

Ameer ahmed circle

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಎಚ್.ರಸ್ತೆಯಲ್ಲಿ ಹೊಳೆ ಬಸ್ ಸ್ಟಾಪ್‍ನಿಂದ ಅಮೀರ್ ಅಹಮದ್ ಸರ್ಕಲ್‍ವರೆಗೆ ಸುಗಮ ಸಂಚಾರ ದೃಷ್ಟಿಯಿಂದ ದ್ವಿಚಕ್ರ ಮತ್ತು ಕಾರ್‍ ಗಳಿಗೆ ಕೆಳಕಂಡಂತೆ ನಿಲುಗಡೆ ಮತ್ತು ನಿಷೇಧ ಮಾಡಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Dr.R.Selvamani) ಆದೇಶಿಸಿದ್ದಾರೆ.

READ | ಬಜಾಜ್ ಕವಾಸಕಿಯನ್ನು ಯಮಹ ಬೈಕ್ ನಂತೆ ಮಾರ್ಪಡಿಸಿದ ಮಾಲೀಕನಿಗೆ ಬಿತ್ತು ಭಾರಿ ದಂಡ

⇒ ವಾಹನ ನಿಲುಗಡೆ ನಿಷೇಧ
• ಅಮೀರ್ ಅಹಮದ್ ಸರ್ಕಲ್‍ನಿಂದ ಮಹಾನಗರ ಪಾಲಿಕೆ ಕಾಂಪ್ಲೆಕ್ಸ್ ವರೆಗೆ(ಕುಚಲಕ್ಕಿ ಕೇರಿ ಕ್ರಾಸ್ ಎದುರು) ಎಡಬದಿಯಲ್ಲಿ ಎಲ್ಲ ವಿಧದ ವಾಹನಗಳ ನಿಲುಗಡೆ ನಿಷೇಧ.
• ಅಮೀರ್ ಅಹಮದ್ ಸರ್ಕಲ್‍ನಿಂದ ಶಿವಪ್ಪನಾಯಕ ಸರ್ಕಲ್ ಬಿಎಸ್‍ಕೆ ಪ್ರೆಸ್ಟೀಜಿಯಸ್ ಬಟ್ಟೆ ಅಂಗಡಿಯ ಬಲಬದಿಯಲ್ಲಿ ಎಲ್ಲ ವಿಧದ ವಾಹನಗಳ ನಿಲುಗಡೆ ನಿಷೇಧ.
• ಸಾವರ್ಕರ್ ನಗರ ಕ್ರಾಸ್(ಡಯಟ್ ಕಾಲೇಜ್ ಕ್ರಾಸ್) ನಿಂದ ಯೂನಿಲೆಟ್ ಮಳಿಗೆವರೆಗೆ ಬಲಬದಿ ಎಲ್ಲ ವಿಧದ ವಾಹನಗಳು ನಿಲುಗಡೆ ನಿಷೇಧ.
• ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್ ಗೇಟ್‍ನಿಂದ ಮೆಡ್‍ ಪ್ಲಸ್ ಮೆಡಿಕಲ್ ಶಾಪ್‍ವರೆಗೆ ಎಡಬದಿಯಲ್ಲಿ ಎಲ್ಲಾ ವಿಧದ ವಾಹನಗಳ ನಿಲುಗಡೆ ನಿಷೇಧ
• ಲೂರ್ದುನಗರ ಕ್ರಾಸ್‍ನಿಂದ ಸೇಕ್ರೆಡ್ ಹಾರ್ಟ್ ಚರ್ಚ್ 2ನೇ ಗೇಟ್‍ವರೆಗೆ ಎಡಬದಿಯಲ್ಲಿ ಎಲ್ಲ ವಿಧದ ವಾಹನಗಳ ನಿಲುಗಡೆ ನಿಷೇಧ.
• ಕರ್ನಾಟಕ ಸಂಘ ಸಿಗ್ನಲ್ ಸರ್ಕಲ್‍ನ 50 ಮೀ ಸುತ್ತ ಎಲ್ಲ ವಿಧದ ವಾಹನಗಳ ನಿಲುಗಡೆ ನಿಷೇಧ.
⇒ ದ್ವಿಚಕ್ರ ವಾಹನ ನಿಲುಗಡೆ
• ಕೋಕಿಲಾ ರೇಡಿಯೋ ಕ್ರಾಸ್‍ನಿಂದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್ ಗೇಟ್‍ವರೆಗೆ ಎಡಬದಿ ದ್ವಿಚಕ್ರ ವಾಹನಗಳ ನಿಲುಗಡೆ
• ಸಂಗಮ್ ಟೈಲರ್ ಶಾಪ್‍ನಿಂದ ಬಿಎಸ್‍ಕೆ ಪ್ರೆಸ್ಟೀಜಿಯಸ್ ಬಟ್ಟೆ ಅಂಗಡಿಯವರೆಗೆ ಬಲಬದಿ ದ್ವಿಚಕ್ರ ವಾಹನಗಳ ನಿಲುಗಡೆ
• ಮೆಡ್‍ಪ್ಲಸ್ ಮೆಡಿಕಲ್ ಶಾಪ್‍ನಿಂದ ಅಯ್ಯ ಆರ್ಕೇಡ್(ಲೂರ್ದುನಗರ ಕ್ರಾಸ್)ವರೆಗೆ ಎಡಬದಿ ದ್ವಿಚಕ್ರ ವಾಹನಗಳ ನಿಲುಗಡೆ
• ಸೇಕ್ರೆಡ್ ಹಾರ್ಟ್ ಚರ್ಚಿನಿಂದ ಕರ್ನಾಟಕ ಪಬ್ಲಿಕ್ ಶಾಲೆ ಗೇಟ್‍ವೆಗೆ ಎಡಬದಿ ದ್ವಿಚಕ್ರ ವಾಹನಗಳ ನಿಲುಗಡೆ.
• ಮೀನಾಕ್ಷಿ ಭವನ ಕ್ರಾಸ್‍ನಿಂದ ಗಿರಿಯಾಸ್ ಶೋ ರೂಂವರೆಗೆ ಎಡಬದಿ ದ್ವಿಚಕ್ರಮ ವಾಹನಗಳ ನಿಲುಗಡೆ.
• ಅರವಿಂದ್ ಮೋಟಾರ್‍ನಿಂದ ಗಣೇಶ ಪ್ರಸಾದ್ ಹೋಟೆಲ್ ಕ್ರಾಸ್‍ವರೆಗೆ ಬಲಬದಿ ದ್ವಿಚಕ್ರಮ ವಾಹನಗಳ ನಿಲುಗಡೆ.
• ಹರ್ಷ ಕ್ರಾಸ್‍ನಿಂದ ಕಾಸರವಳ್ಳಿ ಕಾಂಪ್ಲೆಕ್ಸ್‍ವರೆಗೆ ಬಲಬದಿ ದ್ವಿಚಕ್ರ ವಾಹನಗಳ ನಿಲುಗಡೆ
⇒ ನಾಲ್ಕು ಚಕ್ರ ವಾಹನಗಳ ನಿಲುಗಡೆ
• ಮಹಾನಗರಪಾಲಿಕೆ ಕಾಂಪ್ಲೆಕ್ಸ್ ಪ್ರಾರಂಭದಿಂದ(ಕುಚಲಕ್ಕಿ ಕೇರಿ ಎದುರಿನಿಂದ) ಕೋಕಿಲಾ ರೇಡಿಯೋ ಅಂಗಡಿಯವರೆಗೆ ಎಡಬದಿಯಲ್ಲಿ ಕಾರ್ ಪಾರ್ಕಿಂಗ್.
• ಸುಗಮ್ ಟೈಲರ್ ಶಾಪ್‍ನಿಂದ ಡಯಟ್ ಕಾಲೇಜ್ ಕ್ರಾಸ್‍ವರೆಗೆ ಬಲಬದಿಯಲ್ಲಿ ಕಾರ್ ಪಾರ್ಕಿಂಗ್
• ಗಿರಿಯಾಸ್ ಶೋ ರೂಂನಿಂದ ಮಾತಾ ಮಾಂಗಲ್ಯ ಮಂದಿರ ಗೇಟ್‍ವರೆಗೆ ಎಡಬದಿಯಲ್ಲಿ ಕಾರ್ ಪಾರ್ಕಿಂಗ್.
• ನಂದನ್ ಟವರ್ ಎದುರಿನಿಂದ ಪೆನ್ಶನ್ ಮೊಹಲ್ಲಾ 2ನೇ ಕ್ರಾಸ್ ವರೆಗೆ ಬಲಬದಿಯಲ್ಲಿ ಕಾರ್ ಪಾರ್ಕಿಂಗ್.
• ಪೆನ್ಶನ್ ಮೊಹಲ್ಲಾ 1ನೇ ಕ್ರಾಸ್‍ನಿಂದ ಡಿಹೆಚ್‍ಓ ಆಫೀಸ್‍ವರೆಗೆ ಬಲಬದಿಯಲ್ಲಿ ಕಾರ್ ಪಾರ್ಕಿಂಗ್.
• ಕೃಷ್ಣ ಕೆಫೆ ಕ್ರಾಸ್‍ನಿಂದ ದೀಪಕ್ ಪೆಟ್ರೋಲ್ ಬಂಕ್ ವೆಗೆ ಬಲಬದಿಯಲ್ಲಿ ಕಾರ್ ಪಾರ್ಕಿಂಗ್.

error: Content is protected !!