Kuvempu university | ಕುವೆಂಪು ವಿಶ್ವವಿದ್ಯಾಲಯ ವೆಬ್‍ಸೈಟ್ ಹ್ಯಾಕ್!, ವಿವಿ ವೆಬ್ ಸೈಟ್ ಸ್ಥಗಿತ

kuvempu university hack

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ದೇಶದ ಗೃಹ ಇಲಾಖೆ ಸೇರಿದಂತೆ ಸರ್ಕಾರದ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿ ಮಾಹಿತಿ ಕದಿಯುವುದು ಸಾಮಾನ್ಯ. ಆದರೆ, ಕುವೆಂಪು ವಿಶ್ವವಿದ್ಯಾಲಯದ ವೆಬ್ ಸೈಟ್ ಅನ್ನು ಹ್ಯಾಕ್ ಮಾಡಲಾಗಿದೆ.
ಕುವೆಂಪು ವಿವಿಯ ಅಧಿಕೃತ ವೆಬ್ ಸೈಟ್ ಅನ್ನು ಕಾಲಿಮಲಂಗ್ ಬ್ಲ್ಯಾಕ್ ಹ್ಯಾಟ್ ಹೆಸರಿನ ಗುಂಪೊಂದು ಹ್ಯಾಕ್ ಮಾಡಿದೆ. ಅದನ್ನು ಹ್ಯಾಕರ್ ಗಳೇ ಉಲ್ಲೇಖಿಸಿ ಬರೆದುಕೊಂಡಿದ್ದಾರೆ.

READ | ಮಹಿಳೆಯರೇ ಎಚ್ಚರ, ಶಿವಮೊಗ್ಗದಲ್ಲಿ ಮತ್ತೆ ಸರಗಳ್ಳತನ ಗ್ಯಾಂಗ್ ಸಕ್ರಿಯ, ಒಂದೇ ದಿನ 3 ಕಡೆ ಸರ ಸರಗಳವು

ಹ್ಯಾಕ್ ಮಾಡಿರುವ ಗುಂಪು ಹಲವು ಹ್ಯಾಷ್ ಟ್ಯಾಗ್ (# tag) ಗಳನ್ನು ಬಳಸಿದೆ. ಅದರಲ್ಲಿ ಸೇವ್ ಪ್ಯಾಲೆಸ್ಟೈನ್, ಇಸ್ರೇಲ್ ಡಾಗ್ ಹೀಗೆ ವಿವಿಧ ಪದಗಳನ್ನು ಬಳಸಲಾಗಿದೆ. ವಿವಿಯ ಅಧಿಕೃತ ವೆಬ್ ಸೈಟ್ ಹ್ಯಾಕ್ ಆಗಿದ್ದೇ ವಿಶ್ವವಿದ್ಯಾಲಯದ ತಾಂತ್ರಿಕ ತಂಡ ವೆಬ್ ಸೈಟ್ ಸ್ಥಗಿತಗೊಳಿಸಿದೆ.
ಇದೇ ಮೊದಲನೇನಲ್ಲ, ಮುಂಚೆಯೂ ಆಗಿತ್ತು ಹ್ಯಾಕ್
2018ರ ಮೇ ತಿಂಗಳಲ್ಲಿಯೂ ಒಮ್ಮೆ ಕುವೆಂಪು ವಿವಿಯ ಅಧಿಕೃತ ವೆಬ್ ಸೈಟ್ ಹ್ಯಾಕ್ ಮಾಡಲಾಗಿತ್ತು. ಆಗ ವೆಬ್ ಸೈಟ್ ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಹಾಕಲಾಗಿತ್ತು. ವಿವಿ ವೆಬ್ ಸೈಟಿನ ಮುಖಪುಟದಲ್ಲಿ ಹಂಟರ್ ಬಜ್ವಾ ಹೆಸರಿತ್ತು. ಆಗ ವೆಬ್ ಸೈಟಿನ ಭದ್ರತೆ ತೃಣದಂತಿರುವುದಾಗಿ ಹ್ಯಾಕರ್ ಗಳು ಅಣಕು ಮಾಡಿದ್ದರು.

error: Content is protected !!