Mission Indra dhanassu | ಶಿವಮೊಗ್ಗದಲ್ಲಿ ಇಂದ್ರಧನುಷ್ ಯಶಸ್ಸಿಗೆ ಮೈಕ್ರೋಪ್ಲಾನ್ ಸಿದ್ಧಪಡಿಸಲು ಡಿಸಿ ಸೂಚನೆ

Indra dhanassu vaccination

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಲಸಿಕಾ ವಂಚಿತ ಮಕ್ಕಳು ಮತ್ತು ಗರ್ಭಿಣಿಯರನ್ನು ಗುರುತಿಸಿ ಲಸಿಕೆ ಹಾಕಬೇಕು. ಮೀಸಲ್ಸ್ ರುಬೆಲ್ಲಾ ರೋಗವನ್ನು ನಿರ್ಮೂಲನೆ ಮಾಡಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 3ನೇ ಸುತ್ತಿನ ಮಿಷನ್ ಇಂದ್ರಧನುಷ್ 5.0(ಐಎಂಐ 5.0) ಕುರಿತಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

READ | ಶಿವಮೊಗ್ಗದಲ್ಲಿ ಹೆಚ್ಚುತ್ತಿದೆ ಡೆಂಗೆ, ಚಿಕುನ್’ಗುನ್ಯ, ಲಕ್ಷಣಗಳೇನು? ರೋಗಬಾಧಿತರು ಏನೆಲ್ಲ ಸೇವಿಸಬಾರದು, ಇಲ್ಲಿವೆ ಹೆಲ್ತ್ ಟಿಪ್ಸ್

ಜಿಲ್ಲಾಧಿಕಾರಿ ನೀಡಿದ ಸೂಚನೆಗಳು

Dr R Selvamani
Shimoga DC Dr.R.Selvamani
  1. ಲಸಿಕೆಗಳಿಂದ ತಡೆಗಟ್ಟಬಹುದಾದ ಮಾರಕ ರೋಗಗಳ ವಿರುದ್ದ ಮಕ್ಕಳನ್ನು ರಕ್ಷಿಸಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಅನೇಕ ಲಸಿಕೆಗಳನ್ನು ನೀಡಲಾಗುತ್ತಿದೆ. ಈ ಲಸಿಕೆಗಳನ್ನು ಕಾಲ ಕಾಲಕ್ಕೆ ಪಡೆಯದೇ ವಂಚಿತರಾದ 0 ಯಿಂದ 5 ವರ್ಷದೊಳಗಿನ ಮಕ್ಕಳನ್ನು ಹಾಗೂ ಗರ್ಭಿಣಿಯರನ್ನು ಗುರಿಯಾಗಿಸಿಕೊಂಡು ಅವರಿಗೆ ಬಿಟ್ಟು ಹೋದ ಲಸಿಕೆಗಳನ್ನು ಪೂರ್ಣಗೊಳಿಸಬೇಕು.
  2. ಅ.9 ರಿಂದ 14 ರವರೆಗೆ ನಡೆಯುವ 3ನೇ ಸುತ್ತಿನ ಸಾರ್ವತ್ರಿಕ ಲಸಿಕಾರಣದಲ್ಲಿ ಶೇ.100 ಪ್ರಗತಿ ಸಾಧಿಸಬೇಕು. ಅದಕ್ಕೆ ಅಗತ್ಯವಾದ ಮೈಕ್ರೋಪ್ಲಾನ್ ಸಿದ್ದಪಡಿಸಿ, ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಬೇಕು.
  3. ನಗರ ಪ್ರದೇಶದಲ್ಲಿ ವಿಶೇಷವಾಗಿ ಸ್ಲಂಗಳು, ವಲಸಿಗರು ವಾಸಿಸುವ ಸ್ಥಳಗಳು, ಪೆರಿ ಅರ್ಬನ್ ಪ್ರದೇಶಗಳನ್ನು ಗುರುತಿಸಿ ಅಲ್ಲಿಯ ಮಕ್ಕಳು ಮತ್ತು ಗರ್ಭಿಣಿಯರಿಗೆ ಲಸಿಕೆ ಹಾಕಬೇಕು.
  4. ನಗರ ಸ್ಥಳೀಯ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಅವರ ಸಹಕಾರದೊಂದಿಗೆ ಲಸಿಕಾಕರಣವನ್ನು ಯಶಸ್ವಿಗೊಳಿಸಬೇಕು.
  5. ಶಾಲೆಗಳಲ್ಲಿ ಪ್ರಾರ್ಥನೆ ವೇಳೆ ಲಸಿಕೆಗಳ ಕುರಿತು ಮಾಹಿತಿ ನೀಡಬೇಕು. ಹಾಗೂ ಬಿಟ್ಟು ಹೋದ ಮಕ್ಕಳಿಗೆ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಬೇಕು.
  6. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ಅಂಗನವಾಡಿ ಮಕ್ಕಳ ವಿವರ ನೀಡುವುದರೊಂದಿಗೆ ಬಿಟ್ಟು ಹೋದ ಮಕ್ಕಳಿಗೆ ಲಸಿಕೆ ಹಾಕಿಸಬೇಕು.

Health tips

ಮೀಸಲ್ಸ್-ರುಬೆಲ್ಲಾ(ಎಂಆರ್) ರೋಗವನ್ನು ಪೋಲಿಯೋ ರೋಗದಂತೆ ನಿರ್ಮೂಲನೆ ಮಾಡಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಈ ರೋಗದ ವಿರುದ್ದ ಲಸಿಕೆ ಹಾಕಿಸಿಕೊಳ್ಳಲು ಉತ್ತಮ ರೀತಿಯಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಬೇಕು. ಎಲ್ಲಾ ತಾಲ್ಲೂಕು ವೈದ್ಯಾಧಿಕಾರಿಗಳು ಎಂಆರ್ ಮತ್ತು ಸಾರ್ವತ್ರಿಕ ಲಸಿಕಾ ಗುರಿಯನ್ನು ಸಾಧಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.
ಜಿಲ್ಲೆಯಲ್ಲಿ ಎಂಆರ್ ಮೊದಲ ಮತ್ತು ಎರಡನೇ ಡೋಸ್ ಲಸಿಕೆಯಲ್ಲಿ ಜಿಲ್ಲೆ ಶೇ.95 ಪ್ರಗತಿ ಸಾಧಿಸಿದೆ. ಹೊಸನಗರ, ಸೊರಬ, ಸಾಗರ ಮತ್ತು ಶಿಕಾರಿಪುರ ಇನ್ನೂ ಸ್ವಲ್ಪ ಪ್ರಗತಿ ಸಾಧಿಸಬೇಕಿದೆ. ಲಸಿಕಾಕರಣ ಕಾರ್ಯಕ್ರಮಗಳಿಗೆ ಅಂತರ ಇಲಾಖೆಗಳ ಸಹಕಾರ ಮತ್ತು ಐಇಸಿ ಚಟುವಟಿಕೆಗಳು ಪರಿಣಾಮಕಾರಿಯಾಗಬೇಕು. ಜ್ವರ ಮತ್ತು ದದ್ದು ಕಂಡುಬಂದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ವಿಶೇಷವಾಗಿ ಗರ್ಭಿಣಿಯರಿಗೆ ಈ ಲಕ್ಷಣಗಳು ಕಂಡುಬಂದಲ್ಲಿ ಅಪಾಯ ಹೆಚ್ಚಿರುತ್ತದೆ. ಆದ್ದರಿಂದ ಗ್ರಾಮ ಸಭೆ, ತಾಯಂದಿರ ಸಭೆಗಳಲ್ಲಿ ಈ ಬಗ್ಗೆ ಮಾಹಿತಿ ನೀಡಬೇಕು.
– ಡಾ.ಅನಂತೇಶ್, ಡಬ್ಲ್ಯುಎಚ್‍ಓ ಕನ್ಸಲ್ಟೆಂಟ್

ಜಿಲ್ಲೆಯಲ್ಲಿ (ಮೀಸಲ್ಸ್ ರುಬೆಲ್ಲಾ)ಎಂಆರ್-1 ಮತ್ತು ಎಂಆರ್-2 ಲಸಿಕಾಕರಣ ಶೇ.95 ಪ್ರಗತಿ, ಎರಡನೇ ಸುತ್ತಿನ ಇಂದ್ರ ಧನುಷ್ ಕಾರ್ಯಕ್ರಮದಲ್ಲಿ 0 ಯಿಂದ 1 ವರ್ಷದ ಮಕ್ಕಳ ಲಸಿಕಾ ಪ್ರಗತಿ ಶೇ.94.63, 1 ವರ್ಷ ಮೇಲ್ಪಟ್ಟ ಮಕ್ಕಳ ಶೇ. 87.93, 0 ಯಿಂದ 5 ವರ್ಷದ ಮಕ್ಕಳ ಲಸಿಕೆಯಲ್ಲಿ ಶೇ.93.23, ಗರ್ಭಿಣಿ ಸ್ತ್ರೀಯರ ಲಸಿಕೆ ಶೇ.99.46 ಆಗಿದೆ ಮೂರನೇ ಸುತ್ತಿನ ಲಸಿಕಾಕರಣ ಮೈಕ್ರೊಪ್ಲಾನ್ ಸಿದ್ದವಾಗಿದೆ ಎಂದರು.
ಸಭೆಯಲ್ಲಿ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

Mosquitoes control | ಮನೆಯಲ್ಲಿ ಸೊಳ್ಳೆಗಳ‌ ನಿಯಂತ್ರಣ ಹೇಗೆ? ಇಲ್ಲಿವೆ ಟಿಪ್ಸ್

error: Content is protected !!