Lokayukta raid | ಲೋಕಾಯುಕ್ತರ ಬಲೆಗೆ ಬಿದ್ದ ಮೆಸ್ಕಾಂ ಎಇಇ, ಕಾರಣವೇನು?

Bribe lancha

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮೆಸ್ಕಾಂ (MESCOM) ಎಇಇ ಒಬ್ಬರು ಲೋಕಾಯುಕ್ತ ಬೆಲೆಗೆ ಬಿದ್ದಿದ್ದಾರೆ. ಆನವಟ್ಟಿಯ ತಮ್ಮ ಕಚೇರಿಯಲ್ಲಿ ಹಣ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅವರನ್ನಿ ಬಂಧಿಸಲಾಗಿದೆ.
ಆನವಟ್ಟಿ ಎಇಇ ಜಿ.ರಮೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಎಲೆಕ್ಟ್ರಿಕ್ ಕಂಟ್ರಾಕ್ಟರ್ ಜಿ.ಪ್ರದೀಪ್ ಅವರಿಂದ ₹20 ಸಾವಿರ ಹಣ ಸ್ವೀಕರಿಸುತ್ತಿದ್ದರು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

Crime logo

READ |  ಕುವೆಂಪು ವಿಶ್ವವಿದ್ಯಾಲಯ ವೆಬ್‍ಸೈಟ್ ಹ್ಯಾಕ್!, ವಿವಿ ವೆಬ್ ಸೈಟ್ ಸ್ಥಗಿತ

ಯಾವುದಕ್ಕಾಗಿ ಲಂಚಕ್ಕೆ ಬೇಡಿಕೆ? ಆರೋಪಗಳೇನು?
ಸೊರಬ ತಾಲೂಕಿನ ಪ್ರದೀಪ್ ಅವರು ಕಳೆದ 6 ವರ್ಷಗಳಿಂದ ಕೆಇಬಿ ಇಲಾಖೆಯಲ್ಲಿ ಕ್ಲಾಸ್-1 ಎಲೆಕ್ಟ್ರಿಕಲ್ ಕಾಂಟ್ರ್ಯಾಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಅವರು ಸೊರಬ ತಾಲ್ಲೂಕು ಕೃಷಿ ಪಂಪ್‍ಸೆಟ್ ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ವರ್ಕ್ ಆರ್ಡರ್ ಆಗಿದ್ದು, ಈ ಎಲ್ಲ ಕಾಮಗಾರಿಗಳ ಲೈನ್ ವರ್ಕ್ ಮುಕ್ತಾಯಗೊಂಡಿದೆ. ಅವುಗಳಿಗೆ 25 ಕೆ.ವಿ.ಎ. ಟಿಸಿಗಳನ್ನು ಅಳವಡಿಸುವ ಕೆಲಸ ಬಾಕಿಯಿದ್ದುದರಿಂದ ಆ ಬಗ್ಗೆ ಪ್ರದೀಪ್ ಒಟ್ಟು 7 ಟಿ.ಸಿ.ಗಳನ್ನು ಕೊಡಲು ಕೇಳಿದಾಗ ಎಇಇ ₹20 ಸಾವಿರ ಲಂಚದ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಲಾಗಿದೆ.
ರೆಡ್ ಹ್ಯಾಂಡ್ ಬಲೆಗೆ ಬಿದ್ದ ಅಧಿಕಾರಿ
ಕರ್ತವ್ಯ ನಿರ್ವಹಿಸುತ್ತಿದ್ದ ಕಚೇರಿಯಲ್ಲಿ ಪ್ರದೀಪ್ ಅವರಿಂದ ₹20 ಸಾವಿರ ಲಂಚದ ಹಣವನ್ನು ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ.
ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎನ್.ವಾಸುದೇವರಾಮ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸ್ ಉಪಾಧೀಕ್ಷಕ ಉಮೇಶ ಈಶ್ವರ ನಾಯ್ಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಶಿವಮೊಗ್ಗ ಲೋಕಾಯುಕ್ತ ಕಚೇರಿಯ ಪೊಲೀಸ್ ಸಿಬ್ಬಂದಿ ಮಹಂತೇಶ, ಸುರೇಂದ್ರ, ಬಿ.ಟಿ. ಚನ್ನೇಶ, ಪ್ರಶಾಂತ್‍ ಕುಮಾರ್, ಅರುಣ್‍ ಕುಮಾರ್, ದೇವರಾಜ, ರಘುನಾಯ್ಕ, ಪುಟ್ಟಮ್ಮ, ಕೆ.ಸಿ. ಜಯಂತ, ಗಂಗಾಧರ, ವಿ. ಗೋಪಿ, ಪ್ರದೀಪ್ ಕುಮಾರ್ ಕಾರ್ಯಾಚರಣೆಯಲ್ಲಿದ್ದರು.

error: Content is protected !!