
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ವಿವಿಧೆಡೆ ಶಿವಮೊಗ್ಗ ಲೋಕಾಯುಕ್ತರು (Shimoga Lokayukta) ಬುಧವಾರ ಬೆಳಗ್ಗೆ ದಿಢೀರ್ ದಾಳಿ ನಡೆಸಿದ್ದಾರೆ.
READ | ಶಿವಮೊಗ್ಗದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ, ಯಾರೆಲ್ಲ ಅರ್ಜಿ ಸಲ್ಲಿಸಲು ಅವಕಾಶ?
ತುಂಗಾ ಮೇಲ್ದಂಡೆ ಯೋಜನೆ(UTP)ಯ ಅಧಿಕಾರಿ ಪ್ರಶಾಂತ್ ಮತ್ತು ಶಿಕಾರಿಪುರದ ಪಂಚಾಯತ್ ರಾಜ್ (Panchayatraj) ಇಂಜಿನಿಯರ್ ಶಂಕರ್ ನಾಯ್ಕ್ ಎಂಬುವವರ ಮನೆ, ಫಾರಂ ಸೇರಿದಂತೆ ಎಂಟು ಕಡೆಗಳಲ್ಲಿ ದಾಳಿ ಮಾಡಲಾಗಿದೆ.
ಶಿವಮೊಗ್ಗ, ಭದ್ರಾವತಿ ಮತ್ತು ಶಿಕಾರಿಪುರದಲ್ಲಿ ಒಟ್ಟು 8 ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, ಅಧಿಕಾರಿಗಳ ವಿರುದ್ಧ ಆದಾಯಕ್ಕಿಂತ ಅಧಿಕ ಗಳಿಕೆಯ ಆರೋಪವಿದೆ ಎಂದು ತಿಳಿದುಬಂದಿದೆ.
ಪ್ರಶಾಂತ್ ಅವರ ಶರಾವತಿ ನಗರದಲ್ಲಿರುವ ಮನೆ, ಭದ್ರಾವತಿಯಲ್ಲಿರುವ ತಂದೆಯ ಮನೆ, ಸಂಬಂಧಿಕರ ಮನೆಗಳು ಸೇರಿ ಒಟ್ಟು ಐದು ಕಡೆ ದಾಳಿ ಮಾಡಲಾಗಿದೆ. ಶಂಕರ್ ನಾಯ್ಕ್ ಅವರ ಮನೆ, ಫಾರಂ ಹೌಸ್ ಮತ್ತು ಕಚೇರಿ ಸೇರಿದಂತೆ ಮೂರು ಕಡೆ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.