water pipeline | ಕುಡಿಯುವ ನೀರಿನ ಪೈಪ್ ಲೈನ್ ಕಿತ್ತೊಗೆದ ದುಷ್ಕರ್ಮಿಗಳು

NEWS Bulletin

 

 

ಸುದ್ದಿ ಕಣಜ.ಕಾಂ ಹೊಸನಗರ
HOSANAGARA: ತಾಲೂಕಿನ ಮೇಲಿನ ಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಸಾಲಗೇರಿ ಗ್ರಾಮದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಜಲಜೀವನ್ ಮಿಷನ್ ಕಾಮಗಾರಿಯ ನಿರ್ಮಾಣ ಹಂತದಲ್ಲಿ ಪೈಪ್ ಲೈನ್ ನ್ನು ದುಷ್ಕರ್ಮಿಗಳು ಕಿತ್ತೊಗೆದ ಘಟನೆ ನಡೆದಿದೆ.

READ | 2023ರಲ್ಲಿ ಶಿವಮೊಗ್ಗದಲ್ಲಿ ದಾಖಲಾದ ಕೇಸ್ ಗಳೆಷ್ಟು? ಕೋಟಿ ಕೋಟಿ ಕಳ್ಳತನ ಪ್ರಕರಣ ಬೇಧಿಸಿದ ಖಾಕಿ

ಪೈಪ್‍ಲೈನ್ ಕಿತ್ತೊಗೆಯಲು ಜೆಸಿಬಿ ಬಳಕೆ
ಗ್ರಾಮದ ಪಹ್ಲಾದ್ ಎಂಬುವವರ ಮನೆ ಬಳಿ ಭೂಮಿಯ ಒಳಗೆ ಅಳವಡಿಸಿದ್ದ ಎಚ್.ಡಿ.ಪಿ.ಇ ಪೈಪ್ ನ್ನು ದುಷ್ಕರ್ಮಿಗಳು ಶುಕ್ರವಾರ ರಾತ್ರಿ ಜೆಸಿಬಿ ಯಂತ್ರದ ಸಹಾಯದಿಂದ ಕಿತ್ತೊಗೆದಿದ್ದಾರೆ ಎಂದು ಆರೋಪಿಸಲಾಗಿದೆ.
ಈಗಾಗಲೇ ಭೂಮಿಯ ಒಳಗೆ ಅಳವಡಿಸಿದ್ದ ಪೈಪ್ ಕಿತ್ತೊಗೆದಿದ್ದರಿಂದ ಅಂದಾಜು 10 ಸಾವಿರ ರೂ. ನಷ್ಟ ಉಂಟಾಗಿದೆ. ಗುತ್ತಿಗೆದಾರರು ಸೇರಿದಂತೆ ಸ್ಥಳೀಯರು ಸೇರಿ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ. ಸರ್ಕಾರಿ ಆಸ್ತಿಪಾಸ್ತಿ ಹಾನಿ ಮಾಡಿರುವ ದುಷ್ಕರ್ಮಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

error: Content is protected !!