ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಹೊಸ ವರ್ಷ ಆಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅದರಲ್ಲೂ ಪ್ರವಾಸಿ ತಾಣಗಳು ಫುಲ್ ರಶ್ ಆಗಿವೆ. ರೆಸಾರ್ಟ್, ಹೋಂ ಸ್ಟೇಗಳನ್ನು ಮುಂಚಿತವಾಗಿಯೇ ಬುಕಿಂಗ್ ಮಾಡಿಕೊಂಡಿರುವ ಜನ ಹೊಸ ವರ್ಷ ಬರಮಾಡಿಕೊಳ್ಳಲು ಮುಂದಾಗಿದ್ದಾರೆ.
ಡಿಸೆಂಬರ್ ಎರಡನೇ ವಾರದಿಂದಲೇ ಎಲ್ಲ ರೆಸಾರ್ಟ್ ಗಳು ಭರ್ತಿಯಾಗಿದ್ದು, ಯಾವುದೇ ಲಾಡ್ಜಿಂಗ್ ಸೌಲಭ್ಯ ಹೊಂದಿರುವ ಹೋಟೆಲ್ ಗಳಲ್ಲಿ ರೂಂಗಳೇ ಇಲ್ಲ.
READ | ಕೋವಿಡ್ ಗೆ ಶಿವಮೊಗ್ಗದಲ್ಲಿ ಏನೆಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ? ಡಿಸಿ ಖಡಕ್ ವಾರ್ನಿಂಗ್
ಕುಟುಂಬ, ಸ್ನೇಹಿತರು ಮತ್ತು ಬಾಳಸಂಗಾತಿಯೊಂದಿಗೆ ಹೊಸ ವರ್ಷವನ್ನು ಆಚರಿಸಬೇಕೆಂಬ ಉತ್ಕಟದಿಂದ ರಾಜ್ಯ, ಹೊರ ರಾಜ್ಯಗಳಿಂದ ಜನರು ಮಲೆನಾಡಿನ ಕಡೆಗೆ ಧಾವಿಸಿದ್ದಾರೆ. ಜಿಲ್ಲಾಡಳಿತ ಸಾಕಷ್ಟು ಕಟ್ಟಿನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಈ ನಡುವೆಯೂ ಅದ್ಧೂರಿಯಾಗಿ ಸಂಭ್ರಮಾಚರಣೆಗೆ ಜನ ಮುಂದಾಗಿದ್ದಾರೆ. ಪೊಲೀಸ್ ಇಲಾಖೆ ಸಹ ಸಾಕಷ್ಟು ಷರತ್ತುಗಳನ್ನು ವಿಧಿಸಿದ್ದು, ಅದರಡಿಯಲ್ಲೇ ಹೋಂ ಸ್ಟೇ, ರೆಸಾರ್ಟ್ ನವರು ಸಂಭ್ರಮಕ್ಕೆ ಅವಕಾಶ ನೀಡಬೇಕಾಗುತ್ತದೆ.
ಬೇಕರಿಗಳಲ್ಲೂ ಕೇಕ್ ಮೇನಿಯಾ
ಕೇಕ್ ಕತ್ತರಿಸಿ ಹೊಸ ವರ್ಷ ಆಚರಿಸುವುದು ಟ್ರೆಂಡ್ ಆಗಿ ಮಾರ್ಪಟ್ಟಿದೆ. ಹೀಗಾಗಿ, ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ನಾನಾ ಕಡೆಗಳಲ್ಲಿ ಕೇಕ್ ಗೆ ಭಾರಿ ಬೇಡಿಕೆ ಇದೆ. ಭಿನ್ನಭಿನ್ನ ವಿನ್ಯಾಸ, ಬಣ್ಣ, ಫ್ಲೇವರ್ ಒಳಗೊಂಡ ಕೇಕ್’ಗಳೆಡೆ ಮೀನಿಯಾ ಶುರುವಾಗಿದೆ.