Property parade | 2023ರಲ್ಲಿ ಶಿವಮೊಗ್ಗದಲ್ಲಿ ದಾಖಲಾದ ಕೇಸ್ ಗಳೆಷ್ಟು? ಕೋಟಿ ಕೋಟಿ ಕಳ್ಳತನ ಪ್ರಕರಣ ಬೇಧಿಸಿದ ಖಾಕಿ

Police parade

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 2023ನೇ ಸಾಲಿನಲ್ಲಿ ಸ್ವತ್ತು ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ಸ್ವತ್ತುಗಳನ್ನು ಶನಿವಾರ ವಾರಸುದಾರರಿಗೆ ಹಿಂದಿರುಗಿಸಲಾಯಿತು.
ನಗರದ ಡಿಎಆರ್ ಮೈದಾನದಲ್ಲಿ ನಡೆದ ಪ್ರಾಪರ್ಟಿ ಪರೇಡ್ ನಲ್ಲಿ ವಾರಸುದಾರರಿಗೆ ಪತ್ತೆ ಹಚ್ಚಿದ್ದ ಸಾಮಗ್ರಿಗಳನ್ನು ಹಿಂದಿರುಗಿಸಲಾಯಿತು.

READ | ಬೀ‌ ಬೀರನಹಳ್ಳಿ ಮನೆಗೆ ನುಗ್ಗಿ ದರೋಡೆ ಮಾಡಿದ‌ ಇಬ್ಬರ ಬಂಧನ

2023ನೇ ಸಾಲಿನ 181 ಪ್ರಕರಣಗಳು ಮತ್ತು ಹಿಂದಿನ ವರ್ಷಗಳ 42 ಪ್ರಕರಣಗಳು ಸೇರಿ ಒಟ್ಟು 223 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಅಂದಾಜು 3,55,24,368 ರೂ. ಮೌಲ್ಯದ ಸಾಮಗ್ರಿಗಳನ್ನು ಪತ್ತೆ ಹಚ್ಚಲಾಗಿತ್ತು. ಸಿಇಐಆರ್ ಪೋರ್ಟಲ್ ಮುಖಾಂತರ ಕಳೆದು ಹೋದ ಒಟ್ಟು 333 ಮೊಬೈಲ್ ಗಳನ್ನು ಪತ್ತೆ ಹಚ್ಚಿ ವಾಪಸ್ ನೀಡಲಾಯಿತು.

Property parade2023ರಲ್ಲಿ 492 ಕೇಸ್
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 492 ಸ್ವತ್ತು ಕಳವು ಪ್ರಕರಣಗಳು ವರದಿಯಾಗಿರುತ್ತವೆ. ಸದರಿ ಪ್ರಕರಣಗಳಲ್ಲಿ 1 ಲಾಭಕ್ಕಾಗಿ ಕೊಲೆ, 7 ದರೋಡೆ, 11 ಸುಲಿಗೆ, 1 ಶ್ರೀಗಂಧ ಮರದ ತುಂಡುಗಳ ಕಳ್ಳತನ, 7 ಸರಗಳ್ಳತನ, 7 ಜಾನುವಾರು ಕಳವು, 8 ಮನೆಗಳ್ಳತನ, 27 ಸಾಮಾನ್ಯ ಕಳವು, 43 ಕನ್ನಕಳವು, 63 ವಾಹನ ಕಳವು ಹಾಗೂ 6 ವಂಚನೆ ಪ್ರಕರಣಗಳು ಸೇರಿದಂತೆ ಒಟ್ಟು 181 ಪ್ರಕರಣಗಳನ್ನು ಪತ್ತೆ ಮಾಡಿ ಅಂದಾಜು 2,96,29,775 ರೂ. ಮೌಲ್ಯದ ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು, ಮೊಬೈಲ್ ಫೋನ್, ವಾಹನಗಳು, ಜಾನುವಾರು, ನಗದು ಹಣ, ಎಲೆಕ್ಟ್ರಾನಿಕ್ ವಸ್ತುಗಳು, ಅಡಿಕೆ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿರುತ್ತದೆ.
ಕಳೆದ ವರ್ಷದ 42 ಕೇಸ್
ಅಲ್ಲದೇ ಹಿಂದಿನ ವರ್ಷಗಳಲ್ಲಿ ವರದಿಯಾದ ಪ್ರಕರಣಗಳಲ್ಲಿ 19 ಮನೆಗಳ್ಳತನ, 2 ಮೋಸ, 6 ಸಾಮಾನ್ಯ ಕಳವು ಮತ್ತು 15 ವಾಹನ ಕಳವು ಸೇರಿದಂತೆ ಒಟ್ಟು 42 ಪ್ರಕರಣಗಳನ್ನು ಸಹ ಪತ್ತೆ ಮಾಡಿ ಅಂದಾಜು 58,94,593 ರೂ. ಮೌಲ್ಯದ ಸಾಮಗ್ರಿಗಳನ್ನು ವಶ ಪಡಿಸಿಕೊಂಡಿದ್ದು, ಅವುಗಳನ್ನು ವಾರಸುದಾರರಿಗೆ ವಾಪಸ್ ನೀಡಲಾಯಿತು.

error: Content is protected !!