Sigandur bridge | ಸಿಗಂದೂರು ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ದಿನಾಂಕ ಇನ್ನಷ್ಟು ಮುಂದಕ್ಕೆ, ಕಾರಣವೇನು?

Sigandur Bridge

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸಾಗರ ತಾಲೂಕಿನ ಶ್ರೀಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಸೇರಿದಂತೆ ಆ ಭಾಗದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಸಿಗಂದೂರು ಸೇತುವೆಯ (sigandur brdige) ಕಾಮಗಾರಿ ಪೂರ್ಣಗೊಳ್ಳುವ ದಿನಾಂಕ ಇನ್ನಷ್ಟು ಮುಂದಕ್ಕೆ ಹೋಗಿದೆ.
ಇದೇ ತಿಂಗಳು ಕಾಮಗಾರಿ ಮುಗಿಯಬೇಕಿತ್ತು. ಆದರೆ, ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ‌ ಬೇಕಾಗಲಿದೆ ಎಂದು ಲೋಕಸಭೆ ಸದಸ್ಯ‌‌ ಬಿ.ವೈ.ರಾಘವೇಂದ್ರ (B.Y. Raghavendra) ಹೇಳಿದರು.

BY Raghavendra 1

READ | ಶಿವಮೊಗ್ಗ ನಗರದಲ್ಲಿ ಪಾರ್ಕಿಂಗ್, ನಾನ್ ಪಾರ್ಕಿಂಗ್’ಗೆ ಸ್ಥಳ ನಿಗದಿಪಡಿಸಿ ಜಿಲ್ಲಾಡಳಿತದಿಂದ ಆದೇಶ, ಎಲ್ಲೆಲ್ಲಿ ಪಾರ್ಕಿಂಗ್ ಝೋನ್?

ನಗರದಲ್ಲಿ ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಗಂದೂರು ಸೇತುವೆ ಮಾಡಲು ಹಿನ್ನೀರಿನಲ್ಲಿ‌‌ ನೀರಿನ ಪ್ರಮಾಣ ಮಹತ್ವದ ಪಾತ್ರ ವಹಿಸುತ್ತದೆ. ನೀರು‌ ಅಧಿಕ ಅಥವಾ ಕಡಿಮೆ ಇದ್ದರೆ ಕಾಮಗಾರಿ ಮಾಡಲು ಕಷ್ಟವಾಗುತ್ತದೆ. ಈ ಸಲ ಮಳೆ ಕೊರತೆಯಿಂದ ನೀರಿನ ಪ್ರಮಾಣ ಕಡಿಮೆ ಇದೆ. ಈ‌ ಕಾರಣದಿಂದ ಕಾಮಗಾರಿ ವೇಗವಾಗಿ ಮಾಡಲಾಗುತ್ತಿಲ್ಲ. ಹೀಗಾಗಿ, 2025ರ ಡಿಸೆಂಬರ್ ಒಳಗೆ ಕಾಮಗಾರಿ ಮುಗಿಯುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಶಾಸಕ ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರಾಧ್ಯಕ್ಷ ಜಗದೀಶ್, ಅಣ್ಣಪ್ಪ ಇತರರು‌ ಉಪಸ್ಥಿತರಿದ್ದರು.

error: Content is protected !!