Covid 19 | ಶಿವಮೊಗ್ಗದಲ್ಲಿ ಮೂವರಿಗೆ ಕೋವಿಡ್ ಪಾಸಿಟಿವ್, ಪಾಸಿಟಿವಿಟಿ ದರ ಎಷ್ಟಿದೆ?

Covid vaccine

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಮೂವರಿಗೆ ಕರೋನಾ (corona) ರೂಪಾಂತರ ವೈರಸ್ ಸೋಂಕು ತಗುಲಿದ್ದು, ಕಳೆದ 24 ಗಂಟೆಯ ಅವಧಿಯಲ್ಲಿ ಮೂವರಲ್ಲಿ ಸೋಂಕು ದೃಢಪಟ್ಟಿದೆ.

Health tips

READ | ಶಿವಮೊಗ್ಗ ಆರೋಗ್ಯ ಇಲಾಖೆಯಿಂದ ಕೋವಿಡ್ 19 ಮಾರ್ಗಸೂಚಿ ಬಿಡುಗಡೆ, ಏನೆಲ್ಲ ನಿಯಮಗಳು ಅನ್ವಯ?

ಸೋಂಕಿತರ ಆರೋಗ್ಯ ಸ್ಥಿತಿ ಸಹಜವಾಗಿದ್ದು, ಅವರು ಮನೆಯಲ್ಲೇ ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವುದೇ ಅಪಾಯಗಳಿಲ್ಲ. ಕಾಯಿಲೆಯ ಲಕ್ಷಣಗಳಿದ್ದ ಹಿನ್ನೆಲೆಯಲ್ಲಿ ತಪಾಸಣೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.
ಆರೋಗ್ಯ ಇಲಾಖೆಯು ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಜಿಲ್ಲಾಡಳಿತ ಸಹ ಕಾಯಿಲೆ ತಡೆಗೆ ಮುಂದಾಗಿದೆ. ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 175ಕ್ಕೆ ಏರಿಕೆ
ಕರೊನಾ ಸೋಂಕಿತರ ಒಟ್ಟು ಸಂಖ್ಯೆ 175 ಕ್ಕೆ ಏರಿಕೆಯಾಗಿದೆ. ಕೋವಿಡ್‌ 19 ರಿಂದ ಗುಣಮುಖರಾಗಿ ಶುಕ್ರವಾರ ಏಳು ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.3.29ಕ್ಕೆ ಏರಿಕೆಯಾಗಿದೆ.

error: Content is protected !!