KFD | ಯುವತಿಗೆ ಕೆಎಫ್‍ಡಿ ಪಾಸಿಟಿವ್, ಹೇಗಿದೆ ಆರೋಗ್ಯ ಸ್ಥಿತಿ?

KFD Monkey

 

 

ಸುದ್ದಿ ಕಣಜ.ಕಾಂ ಹೊಸನಗರ
HOSANAGAR: ತಾಲೂಕಿನ ಅರಮನೆಕೊಪ್ಪದ ಗ್ರಾಮದಲ್ಲಿ ಯುವತಿಯೊಬ್ಬಳಿಗೆ ಕೆಎಫ್.ಡಿ (ಮಂಗನ ಕಾಯಿಲೆ) ಪಾಸಿಟಿವ್ ಬಂದಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

READ | ಯಾರೆಲ್ಲ ಕೋರ್ಬಿವ್ಯಾಕ್ಸ್ ಲಸಿಕೆ ಪಡೆಯಬೇಕು, ಎಲ್ಲೆಲ್ಲಿ ಲಭ್ಯ, ಆರೋಗ್ಯ ಇಲಾಖೆ ಹೇಳುವುದೇನು?

18 ವರ್ಷದ ಯುವತಿಗೆ ಮೊದಲ ಸಲ ಪರೀಕ್ಷಿಸಿದಾಗ ವರದಿ ನೆಗೆಟಿವ್ ಬಂದಿತ್ತು. ಎರಡನೇ ಬಾರಿ ಮಂಗನ ಕಾಯಿಲೆ ಇರುವುದು ಆರ್.ಟಿ.ಪಿಸಿಆರ್ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್
ಕಾಯಿಲೆ ಲಕ್ಷಣಗಳಿಂದ ಬಳಲುತ್ತಿದ್ದ ಯುವತಿ ಮೂರು ದಿನಗಳ ಕಾಲ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಳೆ. ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಿಗೆ ಕರೆದೊಯ್ಯಲಾಗಿದೆ ಎಂದು ಹೇಳಲಾಗಿದೆ.

Health tips

error: Content is protected !!