Shivamogga jobs | ಸಿಮ್ಸ್ ನಲ್ಲಿ ಉದ್ಯೋಗ ಅವಕಾಶ, 29ರಂದು ನಡೆಯಲಿದೆ ನೇರ ಸಂದರ್ಶನ

SIMS

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್) ಯಲ್ಲಿ ರೇಡಿಯಾಲಜಿ ವಿಭಾಗಕ್ಕೆ ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಾಪಕರು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

READ | ಭದ್ರಾ ನಾಲೆ, ನದಿ ಪಾತ್ರ ಸುತ್ತಮುತ್ತ ನಿಷೇಧಾಜ್ಞೆ, ಯಾವೆಲ್ಲ ದಿನಗಳಲ್ಲಿ ನೀರು ಬಿಡುಗಡೆ?

ಅರ್ಹ ಆಸ್ತಕ ಅಭ್ಯರ್ಥಿಗಳು ಅರ್ಜಿಯನ್ನು ಫೆ.29 ರೊಳಗೆ ಸಲ್ಲಿಸಬಹುದಾಗಿದ್ದು, ಅರ್ಜಿ ಶುಲ್ಕ ₹2500 ಇರುತ್ತದೆ. ಸಂದರ್ಶನವು ಫೆ.29 ಬೆಳಗ್ಗೆ 11 ಗಂಟೆ, ಸಿಮ್ಸ್ ಸಂಸ್ಥೆಯ ನಿರ್ದೇಶಕರ ಸಭಾ ಕೊಠಡಿ ಶಿವಮೊಗ್ಗ ಇಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿ, ಮೂಲ ಅಧಿಸೂಚನೆ ಅರ್ಹತೆ ಮತ್ತು ಅರ್ಜಿ ನಮೂನೆ ಕುರಿತಂತೆ ಸಂಸ್ಥೆಯ ವೆಬ್‍ಸೈಟ್ ಮತ್ತು ಸಂಸ್ಥೆಯ ಸೂಚನಾ ಫಲಕ ನೋಡಬಹುದೆಂದು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.

error: Content is protected !!