Tunga river front | ಬಹುದಿನಗಳ ನಿರೀಕ್ಷೆಗೆ ಕೂಡಿ ಬಂತು ಕಾಲ, ತುಂಗಾ ರಿವರ್ ಫ್ರಂಟ್ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ, ಯಾವೆಲ್ಲ‌ ಗೇಟ್ ಓಪನ್?

Tunga river front

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬಹುನಿರೀಕ್ಷೆಯ ಯೋಜನೆಯಾದ ತುಂಗಾ ನದಿ ಉತ್ತರ ದಂಡೆ ಅಭಿವೃದ್ದಿ ಯೋಜನೆ’ ಕಾಮಗಾರಿಗಳು‌ ಈಗಾಗಲೇ ಲೋಕಾರ್ಪಣೆಗೊಂಡಿವೆ. ಆದರೆ, ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ. ಆದರೆ, ನಿರೀಕ್ಷೆಯ ಕಾಲ ಮುಗಿದಿದ್ದು, ಜನರ ಪ್ರವೇಶಕ್ಕೂ ಅವಕಾಶ ನೀಡಲಾಗಿದೆ.
ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ಅನುಷ್ಠಾನಗೊಳಿಸಿರುವ ‘ತುಂಗಾ ನದಿ ಉತ್ತರ ದಂಡೆ ಅಭಿವೃದ್ದಿ ಯೋಜನೆ’ಯನ್ನು ಫೆ.23 ರಿಂದ ಮಾ.3ರ ವರೆಗೆ ಸಾರ್ವಜನಿಕರಿಗೆ ಪ್ರಾಯೋಗಿಕವಾಗಿ ಉಚಿತ ಪ್ರವೇಶ ಮೂಲಕ ವೀಕ್ಷಣೆಗಾಗಿ ನೀಡಲಾಗುವುದು.

READ | ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ ರಾಗಿ ಮಾಲ್ಟ್ ಲಭ್ಯ, ಫ್ರೀಡಂ ಪಾರ್ಕ್ ಹೊರಾಂಗಣದಲ್ಲಿ ಅಲ್ಲಮನ ವಚನ

ಎಲ್ಲೆಲಿಂದ ಪ್ರವೇಶ?
ಪ್ರವೇಶ ದ್ವಾರ ಸಂಖ್ಯೆ 2: ಇಮಾಂಬಡ, ಬಿಬಿ ರಸ್ತೆ ಶಿವಮೊಗ್ಗ.
ಪ್ರವೇಶ ದ್ವಾರ ಸಂಖ್ಯೆ 5: ರಾಮಣ್ಣ ಶ್ರೇಷ್ಟಿ ಪಾರ್ಕ್ ಪಕ್ಕ, ಗಾಂಧಿ ಬಜಾರ್.
ಪ್ರವೇಶ ದ್ವಾರ ಸಂಖ್ಯೆ 9: ಬಿಸಿಎ ಹಾಸ್ಟೆಲ್ ಪಕ್ಕ, ಎಸ್‍ಪಿಎಂ ರಸ್ತೆ, ಶಿವಮೊಗ್ಗ.
ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಪ್ರವೇಶ ಸಮಯವಾಗಿರುತ್ತದೆ ಎಂದು ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

error: Content is protected !!