Trending news | ಬಿಜೆಪಿ ಅಧಿಕೃತ ಎಕ್ಸ್ ಖಾತೆಯಲ್ಲಿ ಈಶ್ವರಪ್ಪ ವಿರುದ್ಧ ವಾಗ್ದಾಳಿ, ಏನೆಲ್ಲ ಆರೋಪಿಸಲಾಗಿದೆ?

BJP

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಶಿವಮೊಗ್ಗ ಬಿಜೆಪಿ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಈಶ್ವರಪ್ಪ ವಿರುದ್ಧ ಆರೋಪಿಸಲಾಗಿದೆ.
ಬಿಜೆಪಿ ಆರೋಪವೇನು?

BJP KS ESHWARAPPA
“ರಾಷ್ಟ್ರಭಕ್ತರ ಬಳಗ ಹೆಸರಿನಲ್ಲಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪನವರೇ ವಿಶ್ವನಾಯಯ ನರೇಂದ್ರ ಮೋದಿ ಅವರ ಭಾವಚಿತ್ರ ಬಳಸಿಕೊಂಡು ಮತದಾರರ ದಇಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವುದಲ್ಲದೇ, ತಮ್ಮ ವೈಯಕ್ತಿಕ ಪ್ರಚಾರಕ್ಕಾಗಿ ನರೇಂದ್ರ ಮೋದಿ ಅವರ ವೇಷಭೂಷಣ ತೊಡಿಸಿ ಅವರನ್ನು ಮೂಲೆ ಗುಂಪಾಗಿಸಿ ಹಾಸ್ಯ ಕಲಾವಿದರಂತೆ ಮೆರವಣಿಗೆ ಮಾಡಿರುವುದು ನಿಮ್ಮ ಮೋದಿಯವರ ಮೇಲಿನ ನಕಲಿ ಭಕ್ತಿಯನ್ನು ತೋರುತ್ತದೆ” ಎಂದು ಕಟುವಾಗಿ ಟೀಕಿಸಲಾಗಿದೆ.
ಮೆರವಣಿಗೆಯಲ್ಲಿ ಏನಾಗಿತ್ತು?
ಕೆ.ಎಸ್.ಈಶ್ವರಪ್ಪ ಅವರು ಶುಕ್ರವಾರ ರಾಮಣ್ಣಶ್ರೇಷ್ಠಿ ಪಾರ್ಕ್ ನಿಂದ ಮೆರವಣಿಗೆ ಮೂಲಕ ಹೊರಟು ನಾಮಪತ್ರ ಸಲ್ಲಿಸಿದ್ದರು. ಆದರೆ, ಮೆರವಣಿಗೆಯಲ್ಲಿ ನರೇಂದ್ರ ಮೋದಿ ಅವರನ್ನೇ ಹೋಲುವ ವ್ಯಕ್ತಿಯೊಬ್ಬರನ್ನು ಕರೆದುಕೊಂಡು ಬರಲಾಗಿತ್ತು. ಅದಕ್ಕೆ ಶಿವಮೊಗ್ಗ ಬಿಜೆಪಿ ಎಕ್ಸ್ ಖಾತೆಯಲ್ಲಿ ವಿರೋಧ ವ್ಯಕ್ತವಾಗಿದೆ. 

READ | ಕೆ.ಎಸ್.ಈಶ್ವರಪ್ಪ ನಾಮಪತ್ರ ಸಲ್ಲಿಕೆ, ಮೆರವಣಿಗೆಯಲ್ಲಿ ಮೋದಿ ತದ್ರೂಪಿ ಭಾಗಿ, ಗಾಂಧಿ ಬಜಾರ್ ನಲ್ಲೇ ಮೆರವಣಿಗೆ ಬಿಟ್ಟು ಹೋದ ಈಶ್ವರಪ್ಪ, ಏನೇನಾಯ್ತು? ಇಲ್ಲಿದೆ ಕಂಪ್ಲೀಟ್ ಮಾಹಿತಿ

error: Content is protected !!