Summer camp | ಈಜು ಕಲಿಯಬೇಕೆ? ಇಲ್ಲಿದೆ‌ ಸುವರ್ಣ ಅವಕಾಶ, ಏನೆಲ್ಲ ತರಬೇತಿ ನೀಡಲಾಗುತ್ತಿದೆ, ಇಲ್ಲಿದೆ ಕಂಪ್ಲೀಟ್ ಮಾಹಿತಿ

swimming

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಕ್ಕಳ ಶಾಲೆಗಳಿಗೆ ರಜೆ‌ ಇದೆ. ಏನು ಮಾಡಬೇಕೆಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಸುವರ್ಣ ಅವಕಾಶ. ಕ್ರೀಡಾ ಇಲಾಖೆ ಇದಕ್ಕಾಗಿ ವಿಶೇಷ ಬೇಸಿಗೆ ಶಿಬಿರವನ್ನು ಆಯೋಜಿಸಿದೆ. ಅದರ ಪೂರ್ಣ ವಿವರ ಇಲ್ಲಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಸ್ವಾಮಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರ ಮತ್ತು ಕ್ರೀಡಾ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕ್ರೀಡಾ ಸಂಕೀರ್ಣ ಗೋಪಾಳದ ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಸಂಕೀರ್ಣದಲ್ಲಿರುವ ಈಜುಕೊಳದಲ್ಲಿ 21 ದಿನಗಳ ವಿಶೇಷ ತರಬೇತಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

READ | ನೀರು ತುಂಬಿದ ಬಜೆಟ್ ಗೆ ಬಿದ್ದು ಮಗು ಸಾವು, ಹೇಗೆ ನಡೀತು ಘಟನೆ?

ಈಜುಕೊಳದಲ್ಲಿ 21 ದಿನಗಳ ವಿಶೇಷ ಬೇಸಿಗೆ ತರಬೇತಿ ಶಿಬಿರ ನಡೆಸುವ ಸಲುವಾಗಿ ಕರಪತ್ರ, ಬ್ಯಾನರ್‍ ಗಳನ್ನು ಒಂದು ತಿಂಗಳ ಮುಂಚಿತವಾಗಿ ನಗರದ ಎಲ್ಲ ಕಡೆ ಅಳವಡಿಸಿ ಪ್ರಚಾರ ನೀಡಿ ತರಬೇತಿಗೆ ಪ್ರವೇಶವನ್ನು ಪಡೆಯಲಾಗುತ್ತಿದೆ. ಇದುವರೆಗೆ 250 ಜನ ನೋಂದಾಯಿಸಿಕೊಂಡಿದ್ದಾರೆ ಎಂದರು.
ನಡೆಯಲಿವೆ ಇನ್ನೆರಡು ಶಿಬಿರಗಳು
ಮೊದಲನೇ ಶಿಬಿರವನ್ನು ಮಾರ್ಚ್ ನಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಎರಡನೇ ಶಿಬಿರವನ್ನು ಏ.2 ರಿಂದ 26 ರವರೆಗೆ ಮತ್ತು ಮೂರನೇ ಶಿಬಿರವನ್ನು ಮೇ. 02 ರಿಂದ 25 ರವರೆಗೆ ಆಯೋಜಿಲಾಗಿದೆ ಎಂದು ಹೇಳಿದರು.

  • ಶಿಬಿರದಲ್ಲಿ 4 ವರ್ಷದಿಂದ ಎಲ್ಲ ವಯಸ್ಸಿನವರಿಗೆ ಈಜು ತರಬೇತಿಯನ್ನು ನೀಡಲು ಸಿದ್ಧತೆ ಮಾಡಿಕೊಂಡಿದ್ದೇವೆ.
  • ಶಿಬಿರದಲ್ಲಿ 5 ರಿಂದ 15 ವರ್ಷದವರೆಗಿನ ಮಕ್ಕಳಿಗೆ ಸ್ಟೇಟಿಂಗ್ ತರಬೇತಿಯನ್ನು ಹಾಗೂ 6 ವರ್ಷದಿಂದ ಎಲ್ಲ ವಯಸ್ಸಿನವರಿಗೆ ಲಾನ್ ಟೆನ್ನಿಸ್ ತರಬೇತಿಯನ್ನು ನೀಡಲು ತಯಾರಿ ಮಾಡಿಕೊಳ್ಳಲಾಗಿದೆ. ಎಲ್ಲ ತರಬೇತಿಗಳಿಗೆ ₹2250 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.
  • ಶಿಬಿರದಲ್ಲಿ ಪಾಲ್ಗೊಳ್ಳುವ 10 ವರ್ಷದೊಳಗಿನ ಮಕ್ಕಳ ಜೊತೆ ಪೋಷಕರು ಕಡ್ಡಾಯವಾಗಿ ಬರಬೇಕಾಗಿರುತ್ತದೆ.
  • ಶಿಬಿರದಲ್ಲಿ ವಿಶೇಷವಾಗಿ ಶುಚಿತ್ವವನ್ನು ಶಿಬಿರಾರ್ಥಿಗಳು ಮತ್ತು ಪೋಷಕರು ಜವಾಬ್ದಾರಿಯಿಂದ ನಿರ್ವಹಿಸಿ ಯಶಸ್ಸಿಗೆ ಸಹಕಾರ ನೀಡಬೇಕು.
  • ಈ ತರಬೇತಿಗೆ ಒಂದು ಗಂಟೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ಈಜು ಮತ್ತು ಸ್ಕೇಟಿಂಗ್ ತರಬೇತಿಗೆ ಆಗಮಿಸುವವರು ಕಡ್ಡಾಯವಾಗಿ ತರಬೇತಿ ಸಂಬಂಧಿಸಿದ ಬಟ್ಟೆಗಳನ್ನು ಧರಿಸುವುದು ಮತ್ತು ಟೆನ್ನಿಸ್ ತರಬೇತಿಗೆ ರಾಕೆಟ್ ಮತ್ತು ಬಾಲ್‍ಗಳನ್ನು ತರಬೇಕಾಗಿರುತ್ತದೆ.
  • ಹೆಚ್ಚಿನ ಮಾಹಿತಿಗಾಗಿ 9743820293. ಈಜು-7019475379/ 6362200751/ 9686419812/ 9972333176. ಟೆನ್ನೀಸ್-8374335635. ಸ್ಕೇಟಿಂಗ್-7760921936 ಸಂಪರ್ಕಿಸಿ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ (ಪ್ರ) ಆರ್.ರಾಜು, ಸಿಮ್ಮಿಂಗ್ ಕೋಚ್ ವಿಶ್ವಾಸ್, ಟೆನ್ನಿಸ್ ಕೋಚ್ ಸಂಗಮೇಶ್ ಸ್ಕೇಟಿಂಗ್ ಕೋಚ್ ರಮೇಶ್, ಮಂಜುನಾಥ, ಕೇರ್ ಟೆಕರ್ ಸಚಿನ್ ಹಾಗೂ ಸಿಬ್ಬಂದಿ ಇದ್ದರು.

error: Content is protected !!