ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೊಟ್ಟಿದ್ದ ಸಾಲ ವಾಪಸ್ ಕೊಡುವಂತೆ ಕೇಳಿದ್ದಕ್ಕೆ ಯುವಕನೊಬ್ಬ ಮಹಿಳೆಯನ್ನು ಕೊಲೆ ಮಾಡಿದ ಘಟನೆ ಸಂಭವಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಹೊಳಲೂರು ಗ್ರಾಮದ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಜಯಮ್ಮ (62) ಕೊಲೆಯಾದ ಮಹಿಳೆ. ಈಕೆಯ ಶವವು ಹೊಸನಗರ ತಾಲೂಕು ಹುಂಚಾ ಗ್ರಾಮದ ಮುತ್ತಿನ ಕೆರೆಯಲ್ಲಿ ಪತ್ತೆಯಾಗಿತ್ತು.
READ | ಗೃಹಿಣಿ ಅನುಮಾನಾಸ್ಪದ ಸಾವು, ಶವವಿಟ್ಟು ಪ್ರತಿಭಟಿಸಿದ ಕುಟುಂಬಸ್ಥರು
ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಕೋಡೂರು ಯಳಗಲ್ಲು ಗ್ರಾಮದ ಕೆ.ಕೆ.ಮಯೂರ್ (24) ಎಂಬಾತನನ್ನು ಬಂಧಿಸಿದ್ದು, ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಸಾಲದ ಕಿರಿಕಿರಿ ಜತೆಗೆ ಚಿನ್ನದ ಆಸೆಗೆ ನಡೀತು ಕೊಲೆ
ಜಯಮ್ಮನ ಬಳಿ ಮಯೂರ್ ಸಾಲ ಮಾಡಿದ್ದ. ಈ ಸಾಲವನ್ನು ವಾಪಸ್ ಕೊಡುವಂತೆ ಜಯಮ್ಮ ಕೇಳುತ್ತಿದ್ದಳು. ಇದರಿಂದ ಕಿರಿಕಿರಿಯಾಗಿದ್ದಲ್ಲೇ ಆಕೆಯ ಬಳಿ ಇನ್ನಷ್ಟು ಹಣ ಮತ್ತು ಚಿನ್ನ ಇರಬಹುದು ಎಂದು ಭಾವಿಸಿ ಆಕೆಗೆ ರಿಪ್ಪನ್ ಪೇಟೆಯಲ್ಲಿ ಸೈಟ್ ಕೊಡಿಸುವುದಾಗಿ ನಂಬಿಸಿ ಕರೆಸಿಕೊಂಡಿದ್ದಾನೆ. ಕಾರಿನಲ್ಲಿ ಕೂರಿಸಿಕೊಂಡು ಹೋಗುವಾಗ ಬಾಳೂರು ಗ್ರಾಮದ ಬಳಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾನೆ. ಶವವನ್ನು ಕೆರೆಯಲ್ಲಿ ಎಸೆದುಓಡಿಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪದ ಕಣಜ- 9 | ‘ಕಾಕಪಾದ’ದ ಬಗ್ಗೆ ನಿಮಗೆ ಗೊತ್ತೆ, ತಪ್ಪು ತಿದ್ದುವಲ್ಲಿ ಈ ಪದ ಭಾರಿ ಉಪಯುಕ್ತ