MP Election | ಲೋಕಸಭೆ ಚುನಾವಣೆಗೆ ಏನೇನು ಸಿದ್ಧತೆ ಮಾಡಲಾಗಿದೆ? ಎಷ್ಟು ಮತದಾರರಿದ್ದಾರೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

MP Election

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಲೋಕಸಭೆ ಚುನಾವಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮತದಾರರನ್ನು ಸೆಳೆಯುವುದಕ್ಕಾಗಿ ವಿಶೇಷ ಶೈಲಿಯ ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ.

one click many news logo
ಎಷ್ಟು ಮತದಾರರಿದ್ದಾರೆ?
ಲೋಕಸಭೆ ಕ್ಷೇತ್ರದಲ್ಲಿ ಒಟ್ಟು 2,039 ಮತಗಟ್ಟೆಗಳಿದ್ದು, 8,62,789 ಪುರುಷ, 8,90,061 ಮಹಿಳಾ ಮತ್ತು 35 ತೃತೀಯ ಲಿಂಗಿ ಸೇರಿದಂತೆ ಒಟ್ಟು 17,52,885 ಮತದಾರರು ಇದ್ದಾರೆ.
87 ದುರ್ಬಲ ಮತಗಟ್ಟೆ, 104 ದುರ್ಬಲ ಪ್ರದೇಶ, 4650 ವಲ್ನರಬಲ್ ಮತದಾರರು, 325 ಕ್ರಿಟಿಕಲ್ ಮತಟ್ಟೆಗಳನ್ನು ಗುರುತಿಸಲಾಗಿದೆ.

READ | ಶಿವಮೊಗ್ಗದಲ್ಲಿ ಓಟ್ ಫ್ರಮ್ ಹೋಮ್, ಮೊದಲ ದಿನ ಎಷ್ಟು ಜನ ಮತದಾನ ಮಾಡಿದರು?

ಯಾವ ಮತಗಟ್ಟೆಗಳು ಎಷ್ಟಿವೆ?

Choradi Poling station
ಅಲಂಕಾರಗೊಂಡ ಚೋರಡಿ ಮತಗಟ್ಟೆ.

ಚುನಾವಣೆ ಪ್ರಕ್ರಿಯೆಯಲ್ಲಿ ವಿಶೇಷವಾಗಿ ವಿಶೇಷಚೇತನರು ಯಾವುದೇ ತಾರತಮ್ಯವಿಲ್ಲದೇ ಸಕ್ರಿಯವಾಗಿ ಭಾಗವಹಿಸುವಂತೆ ಮತ್ತು ಹೆಚ್ಚು ಸುಗಮ ಚುನಾವಣೆಗಳನ್ನಾಗಿ ಮಾಡುವ ಸಲುವಾಗಿ ಹಾಗೂ ಮಹಿಳಾ ಮತದಾರರನ್ನು ಮತಗಟ್ಟೆಗಳ ಸೆಳೆಯಲು ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಒಟ್ಟು 40 ಸಖಿ ಮತಗಟ್ಟೆ, 8 ವಿಶೇಷಚೇತನ ನಿರ್ವಹಣೆ, 8 ಯುವಜನ ನಿರ್ವಹಣೆಯ ಮತಗಟ್ಟೆಗಳು, 8 ಧ್ಯೇಯ ಆಧಾರಿತ ಮತಗಟ್ಟೆ ಹಾಗೂ 8 ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಮಸ್ಟರಿಂಗ್ ಕೇಂದ್ರದಿಂದ ಹೊರಟ ಸಿಬ್ಬಂದಿ

Mustering
ಮಸ್ಟರಿಂಗ್ ಕೇಂದ್ರದಿಂದ ಹೊರಟ ಸಿಬ್ಬಂದಿ.

ಮತಗಟ್ಟೆ ಅಧಿಕಾರಿ, ಸಿಬ್ಬಂದಿ ಸೋಮವಾರ ಮತಗಟ್ಟೆಗಳಿಗೆ ಅಗತ್ಯವಾದ ಎಲ್ಲ ಪರಿಕರಗಳೊಂದಿಗೆ ಮಸ್ಟರಿಂಗ್ ಕೇಂದ್ರಗಳಿಂದ ಸೋಮವಾರ ಮಧ್ಯಾಹ್ನ ಹೊರಟರು.
111-ಶಿವಮೊಗ್ಗ ಗ್ರಾಮಾಂತರ ಮತಕ್ಷೇತ್ರಕ್ಕೆ ಎಚ್.ಎಸ್ ರುದ್ರಪ್ಪ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಶಿವಮೊಗ್ಗ, 112-ಭದ್ರಾವತಿ ಮತಕ್ಷೇತ್ರಕ್ಕೆ ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಭದ್ರಾವರಿ, 113-ಶಿವಮೊಗ್ಗ ಮತಕ್ಷೇತ್ರಕ್ಕೆ ಸಹ್ಯಾದ್ರಿ ಕಾಮರ್ಸ್ ಆಂಡ್ ಮ್ಯಾನೇ???ಮೆಂಟ್ ಕಾಲೇಜು, 114-ತೀರ್ಥಹಳ್ಳಿಗೆ ಡಾ.ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜ್ ತೀರ್ಥಹಳ್ಳಿ, 115- ಶಿಕಾರಿಪುರ ಮತಕ್ಷೇತ್ರಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ, 116-ಸೊರಬ ಮತಕ್ಷೇತ್ರಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೊರಬ ಹಾಗೂ 117-ಸಾಗರ ಮತಕ್ಷೇತ್ರಕ್ಕೆ ಸರ್ಕಾರಿ ಜ್ಯೂನಿಯರ್ ಪಿಯು ಕಾಲೇಜು, ಸಾಗರ ಮಸ್ಟರಿಂಗ್ ಕೇಂದ್ರಗಳಿಂದ ಸಿಬ್ಬಂದಿ ಹೊರಟರು.
ಎಷ್ಟು ವಾಹನಗಳ ವ್ಯವಸ್ಥೆ?

Elecction Vehicle
ಮತಗಟ್ಟೆಗೆ ತೆರಳಲು ಸಿದ್ಧವಿರುವ ಖಾಸಗಿ ಜೀಪ್.

ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ದಿನಗಳಂದು ಕರ್ತವ್ಯಕ್ಕೆ ನಿಯೋಜಿಸಿದ ಚುನಾವಣೆ ಸಿಬ್ಬಂದಿ ಸಂಬಂಧಿಸಿದ ಮತಗಟ್ಟೆ ಕೇಂದ್ರಗಳಿಗೆ ಕರೆದುಕೊಂಡು ಹೋಗಲು ಅನುಕೂಲವಾಗುವಂತೆ 269 ಬಸ್’ಗಳು, 7 ಮೀಸಲು ಬಸ್ ಮತ್ತು 13 ಮಿನಿ ಬಸ್ ಸೇರಿದಂತೆ 289 ಬಸ್ ಗಳ ನಿಯೋಜನೆ ಮಾಡಲಾಗಿದೆ.
ನಗರದ ಎಚ್.ಎಸ್ ರುದ್ರಪ್ಪ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಮೈದಾನ ಸೇರಿದಂತೆ ಎಲ್ಲ ಮಸ್ಟರಿಂಗ್ ಕೇಂದ್ರಗಳಲ್ಲಿ ಮತಗಟ್ಟೆ ಸಿಬ್ಬಂದಿ ಹೊರಡಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಇವಿಎಂ, ವಿವಿ ಪ್ಯಾಟ್ ಗಳು, ಕಂಟ್ರೋಲಿಂಗ್ ಯುನಿಟ್, ಶಾಯಿ, ಚುನಾವಣೆಗೆ ಅಗತ್ಯವಾದ ಇತರೆ ಸಾಮಗ್ರಿಗಳೊಂದಿಗೆ ಅಧಿಕಾರಿ, ಸಿಬ್ಬಂದಿಗಳು ಸಿದ್ಧತೆ ಮಾಡಿಕೊಂಡು ನಿಯೋಜಿಸಲಾದ ಬಸ್ ಗಳಲ್ಲಿ ಸಂಬಂಧಿಸಿದ ಮತಗಟ್ಟೆಗಳಿಗೆ ತೆರಳಿದರು.

Kolur PS
ಕೊಳೂರು ಮತಗಟ್ಟೆ.

error: Content is protected !!