ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಹಾವೀರ ಜಯಂತಿ ಹಿನ್ನೆಲೆ ಭಾನುವಾರ ಚಿಕನ್, ಮಟನ್ ಸ್ಟಾಲ್ ಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ, ಜನ ಲಷ್ಕರ್ ಮೊಹಲ್ಲಾದಲ್ಲಿರುವ ಮೀನಿನ ಮಾರುಕಟ್ಟಯ ಕಡೆಗೆ ಧಾವಿಸಿದ್ದಾರೆ. ಇದರ ಲಾಭ ಪಡೆದು ಪ್ರತಿ ಕೆ.ಜಿ ಮೀನಿಗೆ 50ರಿಂದ 80 ರೂಪಾಯಿ ಅಧಿಕ ಪಡೆಯಲಾಯಿತು.
READ | ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿದ 9 ಬೈಕ್ ಸೀಜ್
ಜನರು ಸಹ ಅನಿವಾರ್ಯವಾಗಿ ಕೇಳಿದ ದರಕ್ಕೆ ಮೀನುಗಳನ್ನು ಖರೀದಿಸಿದ್ದಾರೆ. ಬೆಳಗ್ಗೆ 10 ಗಂಟೆ ಬಳಿಕ ವೀಕೆಂಡ್ ಕಫ್ರ್ಯೂ ಆರಂಭವಾಗುವುದರಿಂದ ಕಡಿಮೆ ಅವಧಿಯಲ್ಲಿಯೇ ಜನರು ಖರೀದಿಸಿ ಮನೆಗೆ ಹೋಗಬೇಕೆಂಬ ಧಾವಂತದಲ್ಲಿದ್ದರು.
ಮಾರ್ಗಸೂಚಿ ಉಲ್ಲಂಘನೆ | ಮೀನಿನ ಮಾರುಕಟ್ಟೆ ಹಾಗೂ ಗಾಂಧಿ ಬಜಾರಿನಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಜನರು ಖರೀದಿಗೆ ಮುಗಿಬಿದ್ದಿದ್ದರು. ಇದರಿಂದಾಗಿ, ಭಾರಿ ಜನ ದಟ್ಟಣೆ ಸೃಷ್ಟಿಯಾಗಿತ್ತು. ಬಹುತೇಕ ಜನ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಅನುಸರಿಸಲಿಲ್ಲ. ಅಲ್ಲಿ ಪೊಲೀಸರಾಗಲಿ, ಪಾಲಿಕೆಯ ಅಧಿಕಾರಿಗಳಾಗಿ ಇರಲಿಲ್ಲ.