Railway | ಶಿವಮೊಗ್ಗ ಸೇರಿ ರಾಜ್ಯದ 8 ರೈಲುಗಳ ಸಂಚಾರ ಎರಡು ದಿನ ರದ್ದು, ಇಲ್ಲಿದೆ ರೈಲುಗಳ ಪಟ್ಟಿ

Train

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: (Railway news) ನಿಟ್ಟೂರು ಮತ್ತು ಸಂಪಿಗೆ ರೋಡ್ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್-64ರ ರಸ್ತೆ ಕೆಳಸೇತುವೆಗೆ ತಾತ್ಕಾಲಿಕ ಗರ್ಡರ್ ಗಳನ್ನು ಅಳವಡಿಸುವ ಮತ್ತು ತೆಗೆದುಹಾಕಲು ಅಗತ್ಯ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಸಲುವಾಗಿ, ಈ ಕೆಳಗಿನ ರೈಲುಗಳನ್ನು ರದ್ದು, ಭಾಗಶಃ ರದ್ದು, ಮಾರ್ಗ ಬದಲಾವಣೆ, ನಿಯಂತ್ರಣ ಮತ್ತು ಸಮಯ ಮರುನಿಗದಿ ಮಾಡಲಾಗುತ್ತಿದೆ. ಅವುಗಳ ಮಾಹಿತಿ ಈ ಕೆಳಗಿನಂತಿವೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಮನವಿ ಮಾಡಿದ್ದಾರೆ.
ಯಶವಂತಪುರ-ಶಿವಮೊಗ್ಗ ಟೌನ್ ಇಂಟರ್‌ಸಿಟಿ ಡೈಲಿ ಎಕ್ಸ್‌ಪ್ರೆಸ್ ಸಂಚಾರ ತಾತ್ಕಾಲಿಕ ರದ್ದಾಗಿದೆ. ಶಿವಮೊಗ್ಗ- ಬೆಂಗಳೂರು- ತುಮಕೂರು ನಡುವೆ ಸಂಚರಿಸುವ ಕೆಲವು ರೈಲುಗಳು ಭಾಗಶಃ ರದ್ದಾಗಿವೆ. ಇಲ್ಲಿದೆ ಪೂರ್ಣ ವಿವರ.

READ |  ಮಳೆ ಅನಾಹುತ, 7 ಮನೆ, 143 ಶಾಲೆ ಕಟ್ಟಡ ಡ್ಯಾಮೇಜ್, 3 ಸಾವು, ಜಿಲ್ಲೆಯಲ್ಲಿ ಇನ್ನೇನಾಗಿದೆ?

8 ರೈಲುಗಳ ಸಂಚಾರ ರದ್ದು: ಈ ಕೆಳಗಿನ ರೈಲುಗಳ ಸಂಚಾರ ಆಗಸ್ಟ್ 8 ಮತ್ತು 15 ರಂದು ತಾತ್ಕಾಲಿಕವಾಗಿ 2 ದಿನ ರದ್ದು ಮಾಡಲಾಗುತ್ತಿದೆ

1. ರೈಲು ಸಂಖ್ಯೆ 07346 ತುಮಕೂರು-ಚಾಮರಾಜನಗರ ಡೈಲಿ ಪ್ಯಾಸೆಂಜರ್ ಸ್ಪೆಷಲ್.
2. ರೈಲು ಸಂಖ್ಯೆ 07328 ಚಾಮರಾಜನಗರ-ಮೈಸೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್.
3. ರೈಲು ಸಂಖ್ಯೆ 16239 ಚಿಕ್ಕಮಗಳೂರು-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್.
4. ರೈಲು ಸಂಖ್ಯೆ 16240 ಯಶವಂತಪುರ-ಚಿಕ್ಕಮಗಳೂರು ಡೈಲಿ ಎಕ್ಸ್‌ಪ್ರೆಸ್.
5. ರೈಲು ಸಂಖ್ಯೆ 06576 ತಮಕೂರು-ಕೆಎಸ್ಆರ್ ಬೆಂಗಳೂರು ಮೆಮು ಸ್ಪೆಷಲ್.
6. ರೈಲು ಸಂಖ್ಯೆ 06575 KSR ಬೆಂಗಳೂರು-ತುಮಕೂರು ಮೆಮು ಸ್ಪೆಷಲ್.
7. ರೈಲು ಸಂಖ್ಯೆ 16579 ಯಶವಂತಪುರ-ಶಿವಮೊಗ್ಗ ಟೌನ್ ಇಂಟರ್‌ಸಿಟಿ ಡೈಲಿ ಎಕ್ಸ್‌ಪ್ರೆಸ್.
8. ರೈಲು ಸಂಖ್ಯೆ 16580 ಶಿವಮೊಗ್ಗ ಟೌನ್-ಯಶವಂತಪುರ ಇಂಟರ್‌ಸಿಟಿ ಡೈಲಿ ಎಕ್ಸ್‌ಪ್ರೆಸ್.

ಐದು ರೈಲುಗಳ ಸಂಚಾರ ಭಾಗಶಃ ರದ್ದು:‌ ಈ ಕೆಳಗಿನ ರೈಲುಗಳನ್ನು ಆಗಸ್ಟ್ 8 ಮತ್ತು 15 ರಂದು ತಾತ್ಕಾಲಿಕವಾಗಿ 2 ದಿನ ಭಾಗಶಃ ರದ್ದು ಮಾಡಲಾಗುತ್ತಿದೆ.

1. ರೈಲು ಸಂಖ್ಯೆ 06571 ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ವಿಶೇಷ ರೈಲು ಹಿರೇಹಳ್ಳಿ-ತುಮಕೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ ಮತ್ತು ಈ ರೈಲು ಹಿರೇಹಳ್ಳಿಯಲ್ಲಿ ಕೊನೆಗೊಳ್ಳುತ್ತದೆ.

2. ರೈಲು ಸಂಖ್ಯೆ 06572 ತುಮಕೂರು-ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ ರೈಲು ತುಮಕೂರು-ಹಿರೇಹಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ ಮತ್ತು ಈ ರೈಲು ಹಿರೇಹಳ್ಳಿಯಿಂದ ತನ್ನ ನಿಗದಿತ ಸಮಯದಲ್ಲಿ ಹೊರಡಲಿದೆ.

3. ರೈಲು ಸಂಖ್ಯೆ 20652 ತಾಳಗುಪ್ಪ-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲು ಅರಸೀಕೆರೆ-ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ ಮತ್ತು ಈ ರೈಲು ಅರಸೀಕೆರೆಯಲ್ಲಿ ಕೊನೆಗೊಳ್ಳುತ್ತದೆ.

4. ರೈಲು ಸಂಖ್ಯೆ 12726 ಧಾರವಾಡ-ಕೆಎಸ್‌ಆರ್ ಬೆಂಗಳೂರು ಸಿದ್ದಗಂಗಾ ಡೈಲಿ ಎಕ್ಸ್‌ಪ್ರೆಸ್ ಅರಸೀಕೆರೆ-ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ ಮತ್ತು ಈ ರೈಲು ಅರಸೀಕೆರೆಯಲ್ಲಿ ಕೊನೆಗೊಳ್ಳುತ್ತದೆ.

5. ರೈಲು ಸಂಖ್ಯೆ 12725 ಕೆಎಸ್‌ಆರ್ ಬೆಂಗಳೂರು-ಧಾರವಾಡ ಸಿದ್ದಗಂಗಾ ಡೈಲಿ ಎಕ್ಸ್‌ಪ್ರೆಸ್ ಕೆಎಸ್‌ಆರ್ ಬೆಂಗಳೂರು-ಅರಸಿಕೆರೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ ಮತ್ತು ಈ ರೈಲು ಅರಸೀಕೆರೆಯಿಂದ ತನ್ನ ನಿಗದಿತ ಸಮಯದಲ್ಲಿ ಹೊರಡಲಿದೆ.

ಐದು ರೈಲುಗಳ ಮಾರ್ಗ ಬದಲಾವಣೆ

1. ಆಗಸ್ಟ್ 7 & 14 ರಂದು ವಾಸ್ಕೋ-ಡ-ಗಾಮಾದಿಂದ ಹೊರಡುವ ರೈಲು ಸಂಖ್ಯೆ 17310 ವಾಸ್ಕೋ ಡ ಗಾಮಾ-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್ ರೈಲು ಅರಸೀಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮಾರ್ಗದ ಮೂಲಕ ಸಂಚರಿಸಲಿದೆ. ಹೀಗಾಗಿ ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಗದಿತ ನಿಲುಗಡೆ ಇರುವುದಿಲ್ಲ.

2. ಆಗಸ್ಟ್ 8 ಮತ್ತು 15 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 22687 ಮೈಸೂರು-ವಾರಣಾಸಿ ದ್ವಿ-ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ತುಮಕೂರಿನಲ್ಲಿ ನಿಗದಿತ ನಿಲುಗಡೆ ಇರುವುದಿಲ್ಲ.

3. ಆಗಸ್ಟ್ 8 ಮತ್ತು 15 ರಂದು ಯಶವಂತಪುರ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 82653 ಯಶವಂತಪುರ-ಜೈಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ತುಮಕೂರಿನಲ್ಲಿ ನಿಗದಿತ ನಿಲುಗಡೆ ಇರುವುದಿಲ್ಲ.

4. ಆಗಸ್ಟ್ 8 ಮತ್ತು 15 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 19668 ಮೈಸೂರು-ಉದಯಪುರ ಸಿಟಿ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು, ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ, ದಾವಣಗೆರೆ ಮಾರ್ಗವಾಗಿ ಸಂಚರಿಸಲಿದೆ.

5. ಆಗಸ್ಟ್ 8 ಮತ್ತು 15 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ ವಿಶ್ವಮಾನವ ಡೈಲಿ ಎಕ್ಸ್ ಪ್ರೆಸ್ ರೈಲು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಗದಿತ ನಿಲುಗಡೆ ಇರುವುದಿಲ್ಲ.

ಐದು ರೈಲುಗಳ ನಿಯಂತ್ರಣ

1. ಆಗಸ್ಟ್ 6 ಮತ್ತು 13 ರಂದು ಬಿಕಾನೇರ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16588 ಬಿಕಾನೇರ್-ಯಶವಂತಪುರ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯೆ 150 ನಿಮಿಷ ನಿಯಂತ್ರಿಸಲಾಗುತ್ತದೆ.

2. ಆಗಸ್ಟ್ 8 ಮತ್ತು 15 ರಂದು ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 12629 ಯಶವಂತಪುರ-ಹಜರತ್ ನಿಜಾಮುದ್ದೀನ್ ರೈಲನ್ನು ಮಾರ್ಗ ಮಧ್ಯೆ 50 ನಿಮಿಷ ನಿಯಂತ್ರಿಸಲಾಗುತ್ತದೆ.

3. ಆಗಸ್ಟ್ 8 ಮತ್ತು 15 ರಂದು ರೈಲು ಸಂಖ್ಯೆ 20651 ಕೆಎಸ್ಆರ್ ಬೆಂಗಳೂರು-ತಾಳಗುಪ್ಪ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗದಲ್ಲಿ 10 ನಿಮಿಷಗಳವರೆಗೆ ನಿಯಂತ್ರಿಸಲ್ಪಡುತ್ತದೆ.

4. ಆಗಸ್ಟ್ 8 ಮತ್ತು 15 ರಂದು ಬೆಳಗಾವಿಯಿಂದ ಹೊರಡುವ ರೈಲು ಸಂಖ್ಯೆ 17325 ಬೆಳಗಾವಿ-ಮೈಸೂರು ವಿಶ್ವಮಾನವ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗದಲ್ಲಿ 55 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ

5. ಆಗಸ್ಟ್ 8 ಮತ್ತು 15 ರಂದು ರೈಲು ಸಂಖ್ಯೆ 07345 ಚಾಮರಾಜನಗರ-ತುಮಕೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲನ್ನು ಮಾರ್ಗದಲ್ಲಿ 120 ನಿಮಿಷಗಳವರೆಗೆ ನಿಯಂತ್ರಿಸಲ್ಪಡುತ್ತದೆ.

2 ರೈಲುಗಳ ಸಮಯ ಮರುನಿಗದಿ

1. ಆಗಸ್ಟ್ 8 ಮತ್ತು 15 ರಂದು ರೈಲು ಸಂಖ್ಯೆ 17309 ಯಶವಂತಪುರ-ವಾಸ್ಕೋಡಗಾಮಾ ಡೈಲಿ ಎಕ್ಸ್‌ಪ್ರೆಸ್ ರೈಲು ಯಶವಂತಪುರದಿಂದ 60 ನಿಮಿಷ ತಡವಾಗಿ ಹೊರಡಲಿದೆ.

2. ಆಗಸ್ಟ್ 14 ರಂದು ರೈಲು ಸಂಖ್ಯೆ 06513 ತುಮಕೂರು-ಶಿವಮೊಗ್ಗ ಟೌನ್ ಮೆಮು ಸ್ಪೆಷಲ್ ರೈಲು ತುಮಕೂರಿನಿಂದ 85 ನಿಮಿಷ ತಡವಾಗಿ ಹೊರಡಲಿದೆ.

error: Content is protected !!