ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಪುನರ್ವಸು ಮಳೆ ಭಾರಿ ಅನಾಹುತ ಸೃಷ್ಟಿಸಿದೆ. ತೀರ್ಥಹಳ್ಳಿ, ಹೊಸನಗರ ಭಾಗದಲ್ಲಿ ಗುಡ್ಡ ಕುಸಿತಗಳು ಸಂಭವಿಸಿ, ರಸ್ತೆ ಸಂಚಾರ ಅಸ್ತವ್ಯಸ್ತವಾದರೆ, ನದಿಗಳು ಮೈದುಂಬಿ ಹರಿಯುತ್ತಿರುವುದರಿಂದ ತೋಟ, ಗದ್ದೆಗಳು ಜಲಾವೃತಗೊಂಡಿವೆ.
16 ಮನೆಗಳಿಗೆ ಹಾನಿ
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 16 ಮನೆಗಳಿಗೆ ಹಾನಿಯಾಗಿದೆ. ಶಿವಮೊಗ್ಗದಲ್ಲಿ 4, ಸಾಗರದಲ್ಲಿ 5, ಸೊರಬದಲ್ಲಿ 7 ಸೇರಿ 16 ಮನೆಗಳು ಹಾಗೂ ತೀರ್ಥಹಳ್ಳಿಯಲ್ಲಿ ಒಂದು ಕೊಟ್ಟಿಗೆ ಮನೆಗೆ ಹಾನಿಯಾಗಿದೆ. ಜು.1ರಿಂದ 18ರವರೆಗೆ ಒಟ್ಟು 13 ಕೊಟ್ಟಿಗೆಗಳಿಗೆ ಹಾನಿ ಉಂಟಾಗಿದೆ. 2 ಜಾನುವಾರುಗಳು ಮೃತಪಟ್ಟಿವೆ. 2.35 ಹೆಕ್ಟೆರ್ ತೋಟ ಜಲಾವೃತಗೊಂಡಿದೆ.
READ | ಶಿವಮೊಗ್ಗದಲ್ಲಿ ಇಂದು ರೆಡ್ ಅಲರ್ಟ್, ಎಲ್ಲಿ ಎಷ್ಟು ಮಳೆ? ಏನೇನು ಹಾನಿ?
ಜಲಾಶಯಗಳಿಗೆ ಭರಪೂರ ನೀರು
ಲಿಂಗನಮಕ್ಕಿಯಲ್ಲಿ 1787.8 ಅಡಿ (ಒಳಹರಿವು 69,226 ಕ್ಯೂಸೆಕ್ಸ್), ಭದ್ರಾ 153 ಅಡಿ (42,165 ಕ್ಯೂ.), ತುಂಗಾ 586.81 ಅಡಿ (71,864 ಕ್ಯೂಸೆಕ್ಸ್, ಹೊರಹರಿವು 73,391 ಕ್ಯೂ.), ಅಂಜನಾಪುರ ಜಲಾಶಯ 194.03 ಅಡಿ (1830 ಕ್ಯೂ.), ಅಂಬ್ಲಿಗೊಳ 194.03 ಅಡಿ (3830 ಕ್ಯೂ), ಚಕ್ರ 576.62 ಅಡಿ (5386 ಕ್ಯೂ.), ಮಾಣಿ 580.4 ಅಡಿ (9941 ಕ್ಯೂ.).