Flood | ನೆರೆಪೀಡಿತ ಪ್ರದೇಶಗಳಿಗೆ ಎಸ್.ಪಿ ಭೇಟಿ, ಸಾರ್ವಜನಿಕರಿಗೆ ನೀಡಿದ ಸೂಚನೆಗಳೇನು?

SP Visit

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಜಿಲ್ಲೆಯಾದ್ಯಂತ ಮುಂಗಾರು ಮಳೆ (monsoon rain) ತೀವ್ರಗೊಂಡಿದ್ದು, ಇದರಿಂದಾಗಿ ನದಿ ಮತ್ತು ಹಳ್ಳಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ (GK Mithun kumar) ಅವರು ಜಿಲ್ಲೆಯ ನೆರೆಪೀಡಿತ ಪ್ರದೇಶಗಳಾದ ಶಿಕಾರಿಪುರದ ಅಂಜನಾಪುರ, ಕೊಟ್ಟ, ಕೊಡಸೂರು, ಸೊರಬದ ಅಂದವಳ್ಳಿ, ತಟ್ಟಿಗೆರೆ ಮತ್ತು ಸಾಗರದ ಸೈದೂರು, ಕೆಲವೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ನೆರೆ ಸಂಬಂಧ ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಸೂಚನೆಗಳನ್ನು ನೀಡಿದರು.

READ | ಭಾರಿ ಮಳೆ, ಯಾವೆಲ್ಲ ತಾಲೂಕುಗಳಲ್ಲಿ ಜು.20ರಂದು ರಜೆ ಘೋಷಿಸಲಾಗಿದೆ?

SP Visit 2
ಪ್ರವಾಹ ಪೀಡಿತ ಪ್ರದೇಶಕ್ಕೆ ಎಸ್.ಪಿ. ಜಿ.ಕೆ.ಮಿಥುನ್ ಕುಮಾರ್ ಭೇಟಿ.

ಎಸ್.ಪಿ‌ ನೀಡಿದ ಸೂಚನೆಗಳೇನು?
ನೆರೆ ಪೀಡಿತ ಪ್ರದೇಶಗಳಲ್ಲಿ ನದಿ ನೀರಿಗೆ ಇಳಿಯುವುದು, ಈಜಾಡುವುದು, ಅಪಾಯಕಾರಿ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವುದು, ಫೋಟೊ, ಸೆಲ್ಫಿ ತೆಗೆದುಕೊಳ್ಳುವುದು ಅಪಾಯಕಾರಿಯಾಗಿರುತ್ತದೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಬ್ಯಾರಿಕೇಡ್ ಗಳನ್ನು ಹಾಕಿ, ಫ್ಲೆಕ್ಸ್ ಮತ್ತು ಸೂಚನಾ ಫಲಕಗಳನ್ನು ಅಳವಡಿಸಿ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಪಾಯದ ಬಗ್ಗೆ ಸ್ಥಳೀಯರಲ್ಲಕ ಅರಿವು ಮೂಡಿಸಲಾಯಿತು.
ಸಾರ್ವಜನಿಕರು ಮತ್ತು ಹೊರ ಜಿಲ್ಲೆಯ ಪ್ರವಾಸಿಗರು ನೀರಿನ ಹರಿವು ಕಡಿಮೆಯಾಗುವವರೆಗೆ ಈ ಭಾಗದ ಪ್ರವಾಸಿ ತಾಣಗಳಿಗೆ ಭೇಟಿ ನೀಡದೇ ಇರುವುದು ಸೂಕ್ತ. ನೆರೆ ಸಂಬಂಧ ಮತ್ತು ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು 112 ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆಯುವುದು ಎಂದು‌ ಎಸ್.ಪಿ ತಿಳಿಸಿದರು.

error: Content is protected !!