ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಾಚೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ರಾಜೇಶ್ವರಿ ಸಿ.ಎನ್.ಸಿ ಮಿಷಿನಿಂಗ್ ಟೆಕ್ನಾಲಜಿ ಫ್ಯಾಕ್ಟರಿಯ ಏರ್ ವೆಂಟಿಲೇಟರ್ ಮೂಲಕ ಒಳಪ್ರವೇಶಿ ಕಳ್ಳತನ ಮಾಡಿದ ಆರೋಪಗಳನ್ನು ಬಂಧಿಸಲಾಗಿದೆ.
ಭದ್ರಾವತಿಯ ಜೇಡಿಕಟ್ಟೆ ಹೂಸೂರಿನ ಎಸ್.ಗಂಗಾಧರ್ (28), ಟ್ಯಾಂಕ್ ಮೊಹಲ್ಲಾದ ಮಹಮದ್ ಇಮ್ರಾನ್ ಖಾನ್(35), ನಂಜಪ್ಪ ಲೇ ಔಟ್ ನಿವಾಸಿ ಮಹಮದ್ ಹಪೀಜುಲ್ಲಾ(33), ದೊಣಭಘಟ್ಟದ ಮುಷ್ತಾಕೀಂ ಅಲಿಯಾಸ್ ಮುಸ್ತು(22) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಾಜು ₹1,40,000 ಮೌಲ್ಯದ 1 ಟನ್ ತೂಕದ 40 ಸ್ಟೀಲ್ ಕ್ಯಾಸ್ಟೀಂಗ್ ಪೀಸ್ ಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ₹5,00,000 ಬೆಲೆಯ ASHOK LAYLAND DOST ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
READ | ಭೀಕರ ರಸ್ತೆ ಅಪಘಾತ, ಕ್ರೈಸ್ತ ಧರ್ಮಗುರು ಸಾವು
ಜೂನ್. 30ರಂದು ರಾತ್ರಿ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಫ್ಯಾಕ್ಟರಿಯ ಒಳಗೆ ಹೋಗಿ ಸ್ಟೀಲ್ ಕ್ಯಾಸ್ಟ್ರಿಂಗ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಪ್ರಕರಣದಲ್ಲಿ ಕಳುವಾದ ಸಾಮಗ್ರಿ ಮತ್ತು ಆರೋಪಿತರ ಪತ್ತೆಗಾಗಿ ಎಸ್.ಪಿ. ಜಿ.ಕೆ. ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ, ಕಾರಿಯಪ್ಪ ಮಾರ್ಗದರ್ಶನದಲ್ಲಿ ಭಧ್ರಾವತಿ ಪೊಲೀಸ್ ಉಪಾಧೀಕ್ಷ ನಾಗರಾಜ್ ಮೇಲ್ವಿಚಾರಣೆಯಲ್ಲಿ ನಗರ ವೃತ್ತದ ಸಿಪಿಐ ಶ್ರೀಶೈಲ್ ಕುಮಾರ್ ನೇತೃತ್ವದಲ್ಲಿ ಪಿಎಸ್.ಐ ಟಿ. ರಮೇಶ್, ಎಎಸ್.ಐ ಟಿ.ಪಿ. ಮಂಜಪ್ಪ, ಸಿಬ್ಬಂದಿ ನವೀನ್, ರಾಘವೆಂದ್ರ, ಪ್ರಸನ್ನ ಅವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು. ತನಿಖಾ ತಂಡವು ಆರೋಪಗಳನ್ನು ಪತ್ತೆ ಹಚ್ಚಿದೆ.