Traffic Jam | ಹೆದ್ದಾರಿಯಲ್ಲಿ ಬಿದ್ದ ಮರ, 4 ಗಂಟೆ ಟ್ರಾಫಿಕ್ ಜಾಮ್, ಮುಂದೇನಾಯ್ತು?

Tree fell sorab

 

 

ಸುದ್ದಿ ಕಣಜ.ಕಾಂ ಹೊಸನಗರ
HOSANAGARA: ಮಲೆನಾಡಿನಲ್ಲಿ ಮಳೆಯ ಪ್ರಮಾಣ ಕ್ಷೀಣಿಸಿದೆ. ಆದರೆ, ಅಲ್ಲಲ್ಲಿ ಮರಗಳು ಧರೆಗುರುಳಿತ್ತಿದ್ದು, ಅನಾಹುತಗಳು ಸಂಭವಿಸುತ್ತಿವೆ.

READ |  ಮಲೆನಾಡಿನಲ್ಲಿ ಭೂಕುಸಿತ 1,352 ಗ್ರಾಮಗಳನ್ನು ಗುರುತಿಸಿದ ಸರ್ಕಾರ, ಮೀಸಲಿಟ್ಟ ಅನುದಾನವೆಷ್ಟು?

ಹೊಸನಗರ ತಾಲೂಕಿನ ಮುಂಡಳ್ಳಿ ಸಮೀಪ ಬೃಹತ್ ಮರವೊಂದು ಬುಧವಾರ ಬೆಳಗ್ಗೆ ರಸ್ತೆಗೆ ಅಡ್ಡಲಾಗಿ ಮರ ಬಿದ್ದು, ಸುಮಾರು 4 ಗಂಟೆಗೂ ಹೆಚ್ಚು ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.
ಕಳೆದ ಮರ‍್ನಾಲ್ಕು ದಿನಗಳಿಂದ ಸೋನೆ ಮಳೆಯೊಂದಿಗೆ ಬಿರುಸು ಗಾಳಿ ಬೀಸುತ್ತಿದ್ದು, ಮರಗಳು ಬುಡ ಮೇಲಾಗಿ ಬೀಳುತ್ತಿವೆ. ಶಿವಮೊಗ್ಗ- ಉಡುಪಿಯ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮರ ಬಿದ್ದಿದ್ದರಿಂದ ವಾಹನ ಸವಾರರು ಪರದಾಡಿದರು.
ಸ್ಥಗಿತಗೊಂಡ ಸಂಚಾರ, ಜನರ ಪರದಾಟ
ಮರ ಬಿದ್ದ ವಿಚಾರ ತಿಳಿದಿದ್ದೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಸ್ಥಳೀಯರ ನೆರವಿನಿಂದ ಕಾರ್ಯಾಚರಣೆ ಕೈಗೊಂಡರು. ಬುಧವಾರ ಬೆಳಗಿನ ಜಾವ 3 ಗಂಟೆಗೆ ಮರ ಬಿದ್ದಿದ್ದು, ಬೆಳಗ್ಗೆ 7 ಗಂಟೆಯವರೆಗೆ ಮರ ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು. ಅಲ್ಲಿಯವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

one click many news logo

error: Content is protected !!