Dengue | ಡೆಂಗ್ಯೂ ಪಾಸಿಟಿವಿಟಿಯಲ್ಲಿ ಶಿವಮೊಗ್ಗ ಫಸ್ಟ್! ವೈದ್ಯ ವಿದ್ಯಾರ್ಥಿಗಳಿಗೂ ಡೆಂಗ್ಯೂ ಪಾಸಿಟಿವ್

Dengue

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
(Dengue) SHIVAMOGGA: ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಡೆಂಗ್ಯೂ ‌(dengue cases) ನಿಯಂತ್ರಣ ಟಾಸ್ಕ್ ಫೋರ್ಸ್ ಸಭೆಯಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡುದಪ್ಪ ಕಸಬಿ ಮಾಹಿತಿ ನೀಡಿದರು.

READ | ಶಂಕಿತ ಡೆಂಗ್ಯೂಗೆ ಮೆಗ್ಗಾನ್ ಆಸ್ಪತ್ರೆಯ ನರ್ಸಿಂಗ್ ಆಫಿಸರ್ ಬಲಿ

* ಜನವರಿ 1 ರಿಂದ ಆ.2ರವರೆಗೆ ವರದಿಯಾದ ಪ್ರಕರಣಗಳಲ್ಲಿ ಭದ್ರಾವತಿ ತಾಲೂಕಿನಲ್ಲಿ 476 ರಕ್ತದ ಮಾದರಿ ಪರೀಕ್ಷೆಯಲ್ಲಿ 34 ಪಾಸಿಟಿವ್ ಪ್ರಕರಣ ದಾಖಲಾಗಿದ್ದು ಪಾಸಿಟಿವಿಟಿ ರೇಟ್ ಶೇ.7ರಷ್ಟಿದೆ.
* ಹೊಸನಗರದಲ್ಲಿ 582 ಪರೀಕ್ಷೆಯಲ್ಲಿ 37 ಪಾಸಿಟಿವ್ ಇದ್ದು ಶೇ.6 ಪಾಸಿಟಿವಿಟಿ ದರ.
* ಸಾಗರದಲ್ಲಿ 568 ಪರೀಕ್ಷೆಯಲ್ಲಿ 48 ಪಾಸಿಟಿವ್ ಬಂದಿದ್ದು ಶೇ.8 ಪಾಸಿಟಿವಿಟಿ.
* ಶಿಕಾರಿಪುರದಲ್ಲಿ 625 ಪರೀಕ್ಷೆಯಲ್ಲಿ 104 ಪಾಸಿಟಿವ್ ಬಂದಿದ್ದು ಶೇ.16.64 ಪಾಸಿಟಿವಿಟಿ.
* ಶಿವಮೊಗ್ಗದಲ್ಲಿ 708 ಪರೀಕ್ಷೆಯಲ್ಲಿ 153 ಪಾಸಿಟಿವ್ ಪ್ರಕರಣ ಬಂದಿದ್ದು ಶೇ.21.61,
* ಸೊರಬದಲ್ಲಿ 681 ಪರೀಕ್ಷೆಯಲ್ಲಿ 46 ಪಾಸಿಟಿವ್ ಪ್ರಕರಣ ಬಂದಿದ್ದು ಶೇ.7 ಪಾಸಿಟಿವಿಟಿ
* ತೀರ್ಥಹಳ್ಳಿಯಲ್ಲಿ 473 ಪರೀಕ್ಷೆಯಲ್ಲಿ 35 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಶೇ.7 ಪಾಸಿಟಿವಿಟಿ ದರ ದಾಖಲಾಗಿರುತ್ತದೆ.
* ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 7 ಹಾಗೂ ಒಟ್ಟು ಈವರೆಗೆ 457 ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು, 2 ಮರಣ ದೃಢಪಟ್ಟಿದೆ.
ಡಿಸಿ ನೀಡಿದ ಸೂಚನೆಗಳೇನು?

Gurudatta Hegde 1
* ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ಗುರುದತ್ತ ಹೆಗಡೆ, ಡೆಂಗ್ಯೂ ಪ್ರಕರಣ ಹೆಚ್ಚು ಇರುವ ಶಿವಮೊಗ್ಗ, ಶಿಕಾರಿಪುರ ಮತ್ತು ಸಾಗರ ತಾಲ್ಲೂಕುಗಳಲ್ಲಿ ತೀವ್ರತರವಾಗಿ ಡೆಂಗ್ಯೂ ನಿಯಂತ್ರಣ ಕಾರ್ಯವಾಗಬೇಕು.
* ಮಳೆ ಕಡಿಮೆ ಆಗುತ್ತಿದ್ದಂತೆ ಡೆಂಗ್ಯೂ ಪ್ರಮಾಣ ಹೆಚ್ಚಾಗುತ್ತದೆ. ಆದ್ದರಿಂದ ಹೆಚ್ಚು ಎಚ್ಚರಿಕೆ ವಹಿಸಬೇಕು.
* ಡೆಂಗ್ಯೂ ಪ್ರಕರಣ ಹೆಚ್ಚು ಇರುವೆಡೆ ಮನೆಯೊಳಗೆ ಸಹ ಫಾಗಿಂಗ್‌ಗೆ ವ್ಯವಸ್ಥೆ ಮಾಡಬೇಕು.
* ಸ್ಥಳೀಯ ಸಂಸ್ಥೆಗಳು ಪ್ರತಿ ಗ್ರಾಮ ಪಂಚಾಯ್ತಿಗೆ ಒಂದು ಫಾಗಿಂಗ್ ಮಷೀನ್ ಸಿದ್ದವಿರಿಸಿಕೊಳ್ಳಬೇಕು.
* ಪ್ರತಿ ಶುಕ್ರವಾರ ಸೊಳ್ಳೆ ನಿರ್ಮೂಲನೆ ದಿನವನ್ನು ಪರಿಣಾಮಕಾರಿಗೊಳಿಸಬೇಕು.
* 2 ಕ್ಕಿಂತ ಹೆಚ್ಚು ಡೆಂಗ್ಯೂ ಪ್ರಕರಣ ಪತ್ತೆಯಾದ ಪ್ರದೇಶವನ್ನು ಡೆಂಗ್ಯೂ ಹಾಟ್‌ಸ್ಪಾಟ್ ಎಂದು ಗುರುತಿಸಿ ನಾಲ್ಕು ವಾರಗಳ ಕಾಲ ಆ ಪ್ರದೇಶವನ್ನು ಫಾಗಿಂಗ್ ಮಾಡಿಸಬೇಕು.
* ಸುಬ್ಬಯ್ಯ ಮತ್ತು ಸಿಮ್ಸ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಕೆಲವು ಹಳ್ಳಿಗಳನ್ನು ದತ್ತು ತೆಗೆದುಕೊಂಡು ಡೆಂಗಿ ನಿಯಂತ್ರಣ ಅರಿವು ಕಾರ್ಯ ಕೈಗೊಂಡಿದ್ದಾರೆ. ಅದೇ ರೀತಿಯಲ್ಲಿ ನಗರದಲ್ಲಿನ ಡೆಂಗಿ ಹೆಚ್ಚಿರುವ ಪ್ರದೇಶಗಳನ್ನೂ ದತ್ತು ಪಡೆದು ನಿಯಂತ್ರಣ ಚಟುವಟಿಕೆಯಲ್ಲಿ ಭಾಗಯಾಗಬೇಕೆಂದರು. ಇನ್ನೆರಡು ತಿಂಗಳು ತೀವ್ರತರವಾಗಿ ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಕೆಲಸ ಮಾಡಬೇಕು
* ಶಾಲೆಗಳ ಸುತ್ತಮುತ್ತ ಸಹ ಲಾರ್ವಾ ಉತ್ಪತ್ತಿ ತಾಣ ನಾಶಪಡಿಸುವ ಕೆಲಸವಾಗಬೇಕು. ಶಾಲೆಗಳ ಒಳಗೆ ಸಹ ಫಾಗಿಂಗ್ ಆಗಬೇಕು. ಆರೋಗ್ಯ ಇಲಾಖೆಯಿಂದ ಸಮೀಕ್ಷೆ ನಡೆಸಿ 5 ಸಾವಿರ ಸೊಳ್ಳೆ ನಿವಾರಕ ಡೆಪಾ ಆಯಿಲ್ ನೀಡಲಾಗಿದ್ದು, ಪ್ರತಿ ಶಾಲೆಯಲ್ಲಿ ಓರ್ವ ಶಿಕ್ಷಕ ಡೆಂಗ್ಯೂ ನಿರ್ವಹಣೆ ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು. ಅವರು ವಿದ್ಯಾರ್ಥಿಗಳಿಗೆ ಡೆಂಗ್ಯೂ ಕುರಿತು ಅರಿವು ಮತ್ತು ಸೊಳ್ಳೆ ನಿವಾರಕಗಳನ್ನು ಹಚ್ಚಿಕೊಳ್ಳುವ ಬಗೆಯನ್ನು ತಿಳಿಸಿಕೊಡಬೇಕು.

ಡೆಂಗಿ ನಿಯಂತ್ರಣ ಕಾರ್ಯದಲ್ಲಿ ಎಲ್ಲ ಸ್ಥಳೀಯ ಸಂಸ್ಥೆಯ ನೌಕರರು, ಆರೋಗ್ಯ ಕಾರ್ಯಕರ್ತರು ಭಾಗಿಯಾಗಬೇಕು. ಆರೋಗ್ಯ ಇಲಾಖೆಯವರು ಪ್ರತಿ ದಿನ ಸಂಜೆ ನನಗೆ ಡೆಂಗಿ ಕುರಿತಾದ ದೈನಿಂದಿನ ವರದಿಯನ್ನು ನೀಡಬೇಕು.
ಎನ್.ಹೇಮಂತ್, ಸಿಇಓ, ಜಿಪಂ

ವೈದ್ಯ ವಿದ್ಯಾರ್ಥಿಗಳಿಗೆ ಡೆಂಗ್ಯೂ
ಸಿಮ್ಸ್ ಮೆಡಿಕಲ್ ಕಾಲೇಜಿನ 4 ವಿದ್ಯಾರ್ಥಿಗಳು ಡೆಂಗ್ಯೂ ಪಾಸಿಟಿವ್ ಇದ್ದು, ಕಾಲೇಜು ಮತ್ತು ಹಾಸ್ಟೆಲ್‌ಗಳಲ್ಲಿ ಲಾರ್ವಾ ಉತ್ಪತ್ತಿ ತಾಣ ನಾಶ ಮತ್ತು ಫಾಗಿಂಗ್ ಮಾಡಿಸಬೇಕೆಂದು ಸಿಮ್ಸ್ ಕಾಲೇಜು ಮುಖ್ಯಸ್ಥರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್, ಡಿಎಚ್‌ಓ ಡಾ.ನಟರಾಜ್, ವಿವಿಧ ಕಾರ್ಯಕ್ರಮಾಧಿಕಾರಿಗಳು, ಟಿಎಚ್‌ಓ ಡಾ.ಚಂದ್ರಶೇಖರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

error: Content is protected !!