Linganamakki dam | ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡುಗಡೆ, ಈಗ ನೀರಿನ ಪ್ರಮಾಣ ಎಷ್ಟಿದೆ?

Linganamakki Dam

 

 

ಸುದ್ದಿ ಕಣಜ.ಕಾಂ ಸಾಗರ
SAGARA: ತಿಂಗಳ ಹಿಂದಷ್ಟೇ ನೀರು ಪೂರ್ತಿ ಖಾಲಿಯಾಗಿತು. ಆದರೆ, ಜುಲೈನಲ್ಲಿ ಸುರಿದ ಮಳೆ ಕೈಹಿಡಿದಿದೆ. ಲಿಂಗನಮಕ್ಕಿ ಜಲಾಶಯ ಗರಿಷ್ಠ ಮಟ್ಟ ತಲುಪಲು ಕೆಲವೇ ಅಡಿಗಳು ಬಾಕಿ ಇದ್ದವು. ಒಳಹರಿವಿನ ಪ್ರಮಾಣ ಅಧಿಕ ಇದ್ದುದ್ದರಿಂದ 11 ಕ್ರಸ್ಟ್ ಗೇಟ್ ಗಳನ್ನು ತೆರೆದು ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ.

Linganamakki dam
ಕ್ರಸ್ಟ್ ಗೇಟ್ ತೆರೆಯುವುದಕ್ಕೂ ಮುನ್ನ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಶರಾವತಿ ನದಿಗೆ ಪೂಜೆ ಸಲ್ಲಿಸಿದರು.
ಲಿಂಗನಮಕ್ಕಿ ಜಲಾಶಯ ಗರಿಷ್ಠ 1,819 ಅಡಿ ಇದ್ದು, ಗುರುವಾರ ಬೆಳಗ್ಗೆ ಹೊತ್ತಿಗಾಗಲೇ 1,814 ಅಡಿ ನೀರು ಸಂಗ್ರಹವಾಗಿತ್ತು. ಡ್ಯಾಂ ಭರ್ತಿಯಾಗಲು ಕೇವಲ ಐದು ಅಡಿ ಮಾತ್ರ ಬಾಕಿ ಉಳಿದಿತ್ತು. ಜಲಾಶಯಕ್ಕೆ 53,061 ಕ್ಯೂಸೆಕ್ ಒಳಹರಿವು ಇದೆ. ವಿದ್ಯುದಾಗರಕ್ಕೆ 5,236 ಕ್ಯೂಸೆಕ್ ಸೇರಿದಂತೆ ಜಲಾಶಯದಿಂದ 15,236 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

READ | ಭದ್ರಾ ಜಲಾಶಯದ ನಾಲ್ಕು ಕ್ರಸ್ಟ್ ಗೇಟ್ ಓಪನ್, ಎಷ್ಟು ಕ್ಯೂಸೆಕ್ಸ್ ನೀರು ಬಿಡುಗಡೆ? 

error: Content is protected !!