ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮೈಸೂರು-ತಾಳಗುಪ್ಪ ರೈಲಿನ ಸಂಖ್ಯೆ ಬದಲಾಗಿದೆ. ಈ ಮುಂಚೆ ಮೈಸೂರಿನಿಂದ ತಾಳಗುಪ್ಪಕ್ಕೆ ಆಗಮಿಸುತ್ತಿದ್ದ ರೈಲು ಸಂಖ್ಯೆ 16206 ಇತ್ತು. ಅದನ್ನು 06295 ಎಂದು ಬದಲಿಸಲಾಗಿದೆ. ಅದೇ ರೀತಿ, ತಾಳಗುಪ್ಪದಿಂದ ಮೈಸೂರಿಗೆ ಹೋಗುವ ರೈಲಿನ ಸಂಖ್ಯೆಯನ್ನು 16205ದಿಂದ 06296 ಎಂದು ಬದಲಿಸಲಾಗಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.