ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾದಿಂದಾಗಿ ಕಳೆದ ಮಾರ್ಚ್ ನಿಂದ ಸ್ಥಗಿತಗೊಂಡಿದ್ದ ಮೈಸೂರು-ತಾಳಗುಪ್ಪ ರೈಲು ಸಂಚಾರವನ್ನು ಜನವರಿ 20ರಿಂದ ಪುನರಾರಂಭಿಸಲಾಗುತ್ತಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
ಜನವರಿ 20ರಿಂದ 31ರ ವರೆಗೆ ತಾತ್ಕಾಲಿಕವಾಗಿ ಸಂಚಾರ ಆರಂಭವಾಗಲಿದ್ದು, ಸಾರ್ವಜನಿಕರ ಪ್ರತಿಕ್ರಿಯೆ ಮನಗಂಡು ಸೇವೆಯನ್ನು ಮುಂದುವರಿಸಲಾಗುವುದು.
ರೈಲ್ವೆ ವೇಳಾಪಟ್ಟಿ
ರೈಲು ಸಂಖ್ಯೆ 06295 | ಮೈಸೂರು- ತಾಳಗುಪ್ಪ ರೈಲು | ಜನವರಿ 20ರಂದು ಬೆಳಗ್ಗೆ 6 ಗಂಟೆಗೆ ಮೈಸೂರಿನಿಂದ ಹೊರಡಲಿದೆ. 6.35 ಗಂಟೆಗೆ ಕೃಷ್ಣರಾಜನಗರ, 7.25ಕ್ಕೆ ಹೊಳೆನರಸೀಪುರ, 8 ಗಂಟೆಗೆ ಹಾಸನ, 8.48ಕ್ಕೆ ಅರಸೀಕೆರೆ, 9.21ಕ್ಕೆ ಕಡೂರು ಜಂಕ್ಷನ್, 9.32ಕ್ಕೆ ಬೀರೂರು ಜಂಕ್ಷನ್, 10 ಗಂಟೆಗೆ ತರೀಕೆರೆ, 10.20ಕ್ಕೆ ಭದ್ರಾವತಿ, 10.45ಕ್ಕೆ ಶಿವಮೊಗ್ಗ ಟೌನ್, 11.49 ಗಂಟೆಗೆ ಆನಂದಪುರಂ, ಮಧ್ಯಾಹ್ನ 12.18ಕ್ಕೆ ಸಾಗರ ಜಂಬಗಾರು ಹಾಗೂ 1.15 ಗಂಟೆಗೆ ತಾಳಗುಪ್ಪಕ್ಕೆ ತಲುಪಲಿದೆ.
ರೈಲು ಸಂಖ್ಯೆ 06296 | ತಾಳಗುಪ್ಪ-ಮೈಸೂರು | ಮಧ್ಯಾಹ್ನ 3 ಗಂಟೆಗೆ ತಾಳಗುಪ್ಪದಿಂದ ಹೊರಡಲಿದೆ. 3.18ಕ್ಕೆ ಸಾಗರ ಜಂಬಗಾರು, 3.49ಕ್ಕೆ ಆನಂದಪುರಂ, 4.50ಕ್ಕೆ ಶಿವಮೊಗ್ಗ ಟೌನ್ ಗೆ ಬರಲಿದೆ. 4.55ಕ್ಕೆ ಶಿವಮೊಗ್ಗದಿಂದ ಹೊರಟು 5.15ಕ್ಕೆ ಭದ್ರಾವತಿ, 5.35ಕ್ಕೆ ತರೀಕೆರೆ, 6.03 ಬೀರುರು ಜಂಕ್ಷನ್, 6.15ಕ್ಕೆ ಕಡೂರು ಜಂಕ್ಷನ್, 6.50ಕ್ಕೆ ಅರಸೀಕರೆ, 7.40ಕ್ಕೆ ಹಾಸನ, 8.15ಕ್ಕೆ ಹೊಳೆನರಸೀಪುರ, 9.05ಕ್ಕೆ ಕೃಷ್ಣರಾಜನಗರ, 10.15ಕ್ಕೆ ಮೈಸೂರಿಗೆ ತಲುಪಲಿದೆ. ರೈಲ್ವೆ ಸೇವೆಯನ್ನು ಪಡೆಯುವಂತೆ ರೈಲ್ವೆ ಪ್ರಕಟಣೆಯಲ್ಲಿ ಕೋರಲಾಗಿದೆ.