Free AI tools | ಎಐನ ಯಾವೆಲ್ಲ ತಂತ್ರಾಂಶಗಳು ನಿಮಗೆ ಉಪಯುಕ್ತ? ಇಲ್ಲಿದೆ ಮಾಹಿತಿ

AI

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೃತಕ ಬುದ್ಧಿಮತ್ತೆ (Artificial intelligence- AI) ಜಗತ್ತಿನ ಬಹುತೇಕ ಉದ್ಯಮಗಳಲ್ಲಿ‌ ಬಳಸಲಾಗುತ್ತಿದೆ. ವಿಜ್ಞಾನ, ತಂತ್ರಜ್ಞಾನ, ಇತಿಹಾಸ, ಸಂಶೋಧನೆ ವಿಷಯ ಯಾವುದೇ ಆಗಿರಲಿ ಎಐ ಬಳಕೆಗೆ ಬರುತ್ತಿದೆ. ಇದಕ್ಕಾಗಿಯೇ ಹಲವು ತಂತ್ರಾಂಶಗಳನ್ನು ರೂಪಿಸಲಾಗಿದ್ದು, ಅವುಗಳನ್ನು ನಿತ್ಯ ಜೀವನದಲ್ಲಿ ಬಳಸಬಹುದು.

  1. Scribble Diffusion
    ಚಿತ್ರ ಬಿಡಿಸುವುದೆಂದರೆ ಯಾರಿಗೆ ತಾನೆ ಇಷ್ಟವಿಲ್ಲ? ಪ್ರತಿಯೊಬ್ಬರು ತಮ್ಮ ಬಣ್ಣಗಳಲ್ಲಿ ತಮ್ಮ ಕನಸಿನ ಚಿತ್ರ ಬಿಡಿಸಿರಲೇಬೇಕು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಸ್ಕ್ರಿಬಲ್ ಡಿಫ್ಯೂಷನ್ ನಂತಹ ಎಐ ಟೂಲ್‌ (AI Tool) ಬಳಸಿ ಚಿತ್ರ ಬಿಡಿಸಬಹುದು. ಗೂಗಲ್ ನಲ್ಲಿ  ಸ್ಕ್ರಿಬಲ್ ಡಿಫ್ಯೂಷನ್ ಎಂದು ಟೈಪಿಸಿ, ಚಿತ್ರ ಬಿಡಿಸಿ ಅದರ ಬಗ್ಗೆ ಒಂದೆರಡು ಅಕ್ಷರಗಳನ್ನು ಬರೆದರೆ ಆಕರ್ಷಕ ಚಿತ್ರ ಪರದೆಯ ಮೇಲೆ‌ ತೆರೆದುಕೊಳ್ಳುತ್ತದೆ.
  2. lexica art
    ನಮ್ಮ‌ ಆಲೋಚನೆ ಮತ್ತು ಕಲ್ಪನೆಗೆ ಹೊಂದುವ ಚಿತ್ರ ಹುಡುಕುವುದೇ ಈಗಿನ ದೊಡ್ಡ ಸವಾಲು. ಅದನ್ನು ಈ ವೆಬ್ ಸೈಟ್ ನೀಗಿಸಲಿದೆ. ಲೆಕ್ಸಿಕಾ.ಆರ್ಟ್ ವಯಬ್ ಸೈಟ್ ನಲ್ಲಿ ಅಗತ್ಯವಿರುವ ಚಿತ್ರದ ವಿವರಣೆಯನ್ನು ನೀಡಬೇಕು. ಅದು ಅದಕ್ಕೆ ಸೂಕ್ತ ಎನಿಸುವ ಚಿತ್ರಗಳನ್ನು ಸೃಷ್ಟಿಸಿ ಕೊಡುತ್ತದೆ.
  3. AI Shorts
    ಇದು ಕಂಟೆಂಟ್ ಕ್ರಿಯೇಟರ್ ಗಳಿಗೆ ಹೆಚ್ಚು ಬಳಕೆ ಆಗಬಹುದು. ಒಂದು ದೊಡ್ಡ ವಿಡಿಯೋವನ್ನು ಹಲವು ಭಾಗಗಳಾಗಿ ವಿಭಜಿಸಿ ಕೊಡುತ್ತದೆ. ಇಂಗ್ಲಿಷ್ ಭಾಷೆಯ ವಿಡಿಯೋಗಳಿಗೆ ಹೆಚ್ಚು ಪ್ರಭಾವಶಾಲಿಯಾಗಿ ಬಳಸಬಹುದು.‌ ಕನ್ನಡ ಅಥವಾ ಬೇರೆಯ ಭಾಷೆಗಳದ್ದು ಸರಿಯಾಗಿ ಅರ್ಥ ಆಗದ ಕಾರಣದಿಂದ ವಿಡಿಯೋ ವಿಭಜನೆ ಸರಿಯಾಗಿ ಆಗಲ್ಲ. ಆದರೂ ಹೊಸತನಕ್ಕಾಗಿ ಪ್ರಯತ್ನಿಸಬಹುದು.
  4. beatoven ai
    ನಮ್ಮದೇ ಸಂಗೀತವನ್ನು ಇಲ್ಲಿ ಸಂಯೋಜಿಸಬಹುದು‌. ಇದು ಯೂಟ್ಯೂಬರ್ ಗಳಿಗೆ ಹೆಚ್ಚು ಉಪಯುಕ್ತ.‌ ಸಂಗೀತದ ಅಭಿರುಚಿ ಇರುವವರು ಸಹ ಇದನ್ನು ಬಳಸಬಹುದಾಗಿದೆ. ಅದಕ್ಕಾಗಿ ಶೀರ್ಷಿಕೆ, ಸಂಗೀತದ ಅವಧಿ, ಟೆಂಪೋ ಇತ್ಯಾದಿಗಳನ್ನು ಆಯ್ಕೆ ಮಾಡಿ ನೀಡಬೇಕಾಗುತ್ತದೆ. ಆಗ ಅತ್ಯದ್ಭುತ ಸಂಗೀತ ರಚಿಸಬಹುದು. ಅದಕ್ಕೆ ಯಾವುದೇ ಕಾಪಿ ರೈಟ್ಸ್ ಸಮಸ್ಯೆಗಳು ಆಗಲ್ಲ‌.
  5. Mubert AI
    ಅಕ್ಷರಗಳಿಂದ ಹಾಡುಗಳನ್ನು ರಚಿಸಬಹುದಾಗಿದೆ. ಯಾವ ರೀತಿಯ ಹಾಡು ಬೇಕೆಂಬುದು ಮುಂಚೆಯೇ ನಿರ್ಧರಿಸಿ ಅಪ್ ಲೋಡ್ ಮಾಡಿದರೆ ನಮಗೋಸ್ಕರ ಹಾಡು ಸಿದ್ಧವಾಗುತ್ತದೆ.
  6. Uberduck.ai
    ಏನನ್ನಾದರೂ ಬರೆದು ಅದನ್ನು ರೇಡಿಯೋ, ರೈಲ್ವೆ ಅನೌನ್ಸಮೆಂಟ್ ರೂಪದಲ್ಲಿ ಬದಲಿಸಬಹುದು. ನಾವೇ ಲಿರಿಕ್ಸ್ ಬರೆದು ನಮ್ಮ ಇಷ್ಟದ ಗಾಯಕರ ಧ್ವನಿ ನೀಡಬಹುದು.
  7. AI PPT
    ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಆದಿಯಾಗಿ ಎಲ್ಲರೂ ಪಿಪಿಟಿ ಮೇಲೆ ಅವಲಂಬಿಸುತ್ತಿದ್ದಾರೆ. ಅದಕ್ಕಾಗಿ ಎಐ ಆಧಾರಿತ tome ವೆಬ್ ಸೈಟ್ ಬಳಸಬಹುದು. ಯಾವುದಾದರು ಒಂದು ವಿಷಯ ಬಗ್ಗೆ ಪಿಪಿಡಿ ಬೇಕೆಂದು ಸರಿಯಾದ ಮಾಹಿತಿ ನಮೂದಿಸಿದರೆ ಸಾಕು ಕೆಲಹೊತ್ತಲೇ ಅದು ಸಿದ್ಧವಾಗುತ್ತದೆ.
  8. AI Design
    ಡಿಸೈನರ್ ಗಳಿಗೆ ಇದು ಅತ್ಯುಪಯುಕ್ತ. flair.ai ವೆಬ್ ಸೈಟ್ ಬಳಸಿ ಬೇಕಾದ ವಿನ್ಯಾಸ ಸಿದ್ಧಪಡಿಸಬಹುದು.
  9. AI voice
    ನಮ್ಮದೇ ಧ್ವನಿಯಲ್ಲಿ ಮಾತನಾಡಿ ಮಿಮಿಕ್ರಿ ಮಾಡುವ ಕಲಾವಿದರನ್ನು ಕಂಡಿದ್ದೇವೆ. ಆದರೆ, ಇದು ಎಐ ಜಗತ್ತು. ಇಲ್ಲಿ ನಮ್ಮದೇ ಧ್ವನಿಯ ತದ್ರೂಪಿಯನ್ನು ಯಾವ ಖರ್ಚಿಲ್ಲದೇ ಮಾಡಬಹುದು. ಅದಕ್ಕಾಗಿ Discript ಎಂಬ ವೆಬ್ ಸೈಟ್ ಉಪಯುಕ್ತ. ವೆಬ್ ಸೈಟ್ ನಲ್ಲಿ ತಂತ್ರಾಂಶ ಲಭ್ಯವಿದ್ದು, ಅದನ್ನು ಡೌನ್ ಲೋಡ್ ಮಾಡಿಕೊಂಡು ತದ್ರೂಪಿ ಧ್ವನಿ ದಾಖಲಿಸಬಹುದು. ವಿಶೇಷವೆಂದರೆ, ಅದನ್ನು ಅಕ್ಷರವಾಗಿಯೂ ಬದಲಿಸಬಹುದು.
  10. AI enhance
    ಹಳೆಯ ಕಾಲದ ಚಿತ್ರಗಳು ನಿಮ್ಮ ಬಳಿ ಇದ್ದರೆ ಈ‌ ವೆಬ್ ಸೈಟ್ ಬಳಸಿ ಅವುಗಳಿಗೆ ಹೆಚ್ಚು ಸ್ಪಷ್ಟತೆ ನೀಡಬಹುದು. ಕಪ್ಪು ಬಿಳಿ ಚಿತ್ರವಾಗಿದ್ದರೆ ಬಣ್ಣದ್ದಾಗಿ ಪರಿವರ್ತಿಸಬಹುದು. ಹೀಗೆ ಹತ್ತು ಹಲವಾರು ವೆಬ್ ಸೈಟ್, ತಂತ್ರಾಂಶಗಳು ಲಭ್ಯ ಇವೆ.

error: Content is protected !!