ಭತ್ತದ ಗದ್ದೆಗೆ ನುಗ್ಗಿದ ಆನೆ, ಬೆಳೆ ಹಾನಿ, ಜನರ ಆಕ್ರೋಶ

 

 

ಸುದ್ದಿ ಕಣಜ.ಕಾಂ | TALUK | WILD LIFE
ಶಿವಮೊಗ್ಗ: ತಾಲೂಕಿನ ಉಂಬ್ಳೆಬೈಲು ಗ್ರಾಮದಲ್ಲಿ ಶನಿವಾರ ರಾತ್ರಿ ಭತ್ತದ ಗದ್ದೆಯೊಂದಕ್ಕೆ ಕಾಡಾನೆ ನುಗ್ಗಿದ ಘಟನೆ ನಡೆದಿದೆ.
ಗ್ರಾಮದ ನಿವಾಸಿ ಚಂದ್ರಶೇಖರ್ ಗೌಡ ಅವರ ಗದ್ದೆಗೆ ಆನೆ ನುಗ್ಗಿದ್ದು, ಆನೆಯ ಹೆಜ್ಜೆ ಗುರುತು ಪತ್ತೆಯಾಗಿವೆ. ಇದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಂಬ್ಳೆಬೈಲು ಪ್ರದೇಶದಲ್ಲಿ ಕಾಡಾನೆ ದಾಳಿ ನಿರಂತರವಾಗಿ ನಡೆಯುತ್ತಲೇ ಇದೆ. ಆದರೆ, ಅರಣ್ಯ ಇಲಾಖೆ ಈ ನಿಟ್ಟಿನಲ್ಲಿ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

error: Content is protected !!