ಸುದ್ದಿ ಕಣಜ.ಕಾಂ ಹೊಳೆಹೊನ್ನೂರು
HOLEHONNUR: ಮೊಬೈಲ್ ನಲ್ಲಿ ಮಾತನಾಡುತ್ತಲೇ ಬಸ್ ಚಾಲನೆ ಮಾಡುತ್ತಿದ್ದ ಎನ್ನಲಾದ ಚಾಲಕ ಬಸ್ ಅನ್ನು ಗದ್ದೆಗೆ ನುಗ್ಗಿಸಿದ್ದು, ಬಸ್ ಪಲ್ಟಿಯಾದ ಘಟನೆ ಸಂಭವಿಸಿದೆ.
READ | ₹8 ಲಕ್ಷ ಚೆಕ್ ಅಮಾನ್ಯಾಗಿದ್ದಕ್ಕೆ ₹16 ಲಕ್ಷ ದಂಡ!
ಹೊಳೆಹೊನ್ನೂರು ಸಮೀಪದ ಅರಹತೊಳಲು, ಕಲ್ಲುಹಾಳ್ ಗ್ರಾಮಗಳ ನಡುವೆ ಖಾಸಗಿ ಬಸ್ ಗುರುವಾರ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದಿದೆ. ಅದೃಷ್ಟಕ್ಕೆ ಬಸ್ ನಲ್ಲಿ ಹೆಚ್ಚು ಜನರು ಇರಲಿಲ್ಲ ಎಂದು ತಿಳಿದುಬಂದಿದೆ. ಬರೀ ಆರು ಜನರಷ್ಟೇ ಇದ್ದು ಅದರಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಮಾರಶಟ್ಟಿಹಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಕೆಲಹೊತ್ತು ಟ್ರಾಫಿಕ್ ಜಾಮ್
ಬಸ್ ಪಲ್ಟಿಯಾದ ವಿಷಯ ಗೊತ್ತಾಗುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಸ್ಥರು ಸಹಾಯಕ್ಕೆ ದೌಡಾಯಿಸಿದ್ದಾರೆ. ಸ್ಥಳಕ್ಕೆ ಆಗಮಿಸಿ ಗಾಯಾಳುಗಳಿಗೆ ಸಹಾಯ ಮಾಡಿದ್ದಾರೆ. ಇದರಿಂದ ಕೆಲಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು.