ಸುದ್ದಿ ಕಣಜ.ಕಾಂ | TALUK | WILD LIFE
ಶಿವಮೊಗ್ಗ: ಭಾನುವಾರ ಬೆಳಗಿನ ಜಾವದ ಘಟನೆ ಮಾಸುವ ಮುನ್ನವೇ ಸೋಮವಾರ ಬೆಳಗ್ಗೆಯೂ ಕಾಡಾನೆಯೊಂದು ಉಂಬ್ಳೆಬೈಲು ಗ್ರಾಮದ ತೋಟ, ಗದ್ದೆಗಳಿಗೆ ನುಗ್ಗಿ ಭಾರಿ ದಾಂಧಲೆ ಮಾಡಿದೆ.
ಗ್ರಾಮಸ್ಥರು ಹೇಳುವಂತೆ, ಸುಮಾರು 10-15 ಎಕರೆ ಪ್ರದೇಶದಲ್ಲಿ ಕಾಡಾನೆಯು ನುಗ್ಗಿದ್ದು, ಸಾಕಷ್ಟು ಪ್ರಮಾಣದ ನಷ್ಟವಾಗಿದೆ. ತೆಂಗು, ಅಡಿಕೆ ಮರಗಳನ್ನು ಮುರಿದಿದೆ.
ಘಟನೆಯ ಬಗ್ಗೆ ಮಾಹಿತಿ ಲಭಿಸಿದ್ದೇ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸೂಕ್ತ ಪರಿಹಾರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ತಿಳಿಸಿದ್ದಾರೆ.