ಸುದ್ದಿ ಕಣಜ.ಕಾಂ
ಹೊಸನಗರ: ಲಗೇಜ್ ಆಟೋದಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಅವರಿಂದ ಭಾರಿ ಪ್ರಮಾಣದ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಆಟೋ ಚಾಲಕ ಬಟ್ಟೆಮಲ್ಲಪ್ಪದ ಮೀನು ವ್ಯಾಪಾರಿ ಫಯಾಸ್ ಮತ್ತು ಗಾಂಜಾ ಪೂರೈಕೆ ಮಾಡಿದ ಕೇಶವಪುರದ ಸೈಯ್ಯದ್ ಫರೀದ್ ಎಂಬುವವರನ್ನು ಬಂಧಿಸಲಾಗಿದೆ.
ತಹಸೀಲ್ದಾರ್ ವಿ.ಎಸ್.ರಾಜೀವ್, ಸಿಪಿಐ ಮಧುಸೂದನ್, ಪಿಎಸ್.ಐ ರಾಜೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ.