KSLUದಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಸೇರಿ ವಿವಿಧ ಹುದ್ದೆಗಳ‌ ನೇಮಕಾತಿಗೆ ಅಧಿಸೂಚನೆ, ಇಂದೇ ಸಲ್ಲಿಸಿ ಅರ್ಜಿ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ವಿವಿಧ ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದು, ಅರ್ಜಿ ಸಲ್ಲಿಸಲು ನವೆಂಬರ್ 30 ಅಂತಿಮ ದಿನವಾಗಿದೆ.
ಸಂಬಂಧಪಟ್ಟ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಜತೆಗೆ ಎನ್‌ಇಟಿ / ಎಸ್‌ಎಲ್‌ಇಟಿ / ಪಿಎಚ್‌ಡಿ ಆಗಿರಬೇಕು.

READ | ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿವಿಗೆ ಸ್ಥಾನ, ಇಬ್ಬರು ಪ್ರಾಧ್ಯಾಪಕ ಸಾಧನೆಗೆ ಮೆಚ್ಚುಗೆ

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗಾಗಿ ವಿವಿಯ ವೆಬ್ ಸೈಟ್ ಗೆ ಭೇಟಿ ನೀಡಬಹುದು. ಅಲ್ಲಿ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡು ಭರ್ತಿ ಮಾಡಿ ಶುಲ್ಕ ಪಾವತಿಯ ರಸೀದಿಯನ್ನು ಲಗತ್ತಿಸತಕ್ಕದ್ದು. ನಂತರ ರಿಜಿಸ್ಟ್ರಾರ್, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ನವನಗರ, ಹುಬ್ಬಳ್ಳಿ 580025 ಕಳುಹಿಸುವಂತೆ ಸೂಚಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ವೇಳೆ ₹700 ಶುಲ್ಕ ಹಾಗೂ ₹1,200 ಪ್ರೊಸೆಸಿಂಗ್ ಶುಲ್ಕ ಪಾವತಿಸಬೇಕು. ಎಸ್‌ಸಿ, ಎಸ್‌ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ ಶೇ.50 ಶುಲ್ಕ ವಿನಾಯಿತಿ ನೀಡಲಾಗಿದೆ.

ಹುದ್ದೆ ಹೆಸರು ಹುದ್ದೆ ಸಂಖ್ಯೆ
ಅಸಿಸ್ಟೆಂಟ್ ಪ್ರೊಫೆಸರ್ (ಕಾನೂನು) 2
 ಅಸಿಸ್ಟೆಂಟ್ ಪ್ರೊಫೆಸರ್( ಮ್ಯಾನೇಜ್ಮೆಂಟ್ ಸ್ಟಡೀಸ್) 2
ಅಸಿಸ್ಟೆಂಟ್ ಪ್ರೊಫೆಸರ್ (ಇತಿಹಾಸ) 1
ಅಸಿಸ್ಟೆಂಟ್ ಪ್ರೊಫೆಸರ್(ಕನ್ನಡ) 1
ದೈಹಿಕ ಶಿಕ್ಷಣ ಮತ್ತು ಕ್ರೀಡಾ ಸಹಾಯಕ ನಿರ್ದೇಶಕ – 1 1
ಅಸಿಸ್ಟೆಂಟ್ ಪ್ರೊಫೆಸರ್(ಇಂಗ್ಲಿಷ್) 1
ಅಸಿಸ್ಟೆಂಟ್ ಪ್ರೊಫೆಸರ್(ಅರ್ಥಶಾಸ್ತ್ರ) 1
ಅಸಿಸ್ಟೆಂಟ್ ಪ್ರೊಫೆಸರ್(ಪೊಲಿಟಿಕಲ್ ಸೈನ್ಸ್‌) 1

NOTIFICATION

WEBSITE

https://www.suddikanaja.com/2021/10/17/job-vacancy-in-karnatakas-many-departments-kpsc-published-status-of-recruitments/

error: Content is protected !!