19 ತಿಂಗಳು ಬಳಿಕ ಶಾಲೆಗೆ ಬಂದ ಮಕ್ಕಳಿಗೆ ಆರತಿ ಬೆಳಗಿ, ಚಾಕ್ಲೆಟ್ ವಿತರಿಸಿ ಸ್ವಾಗತ, ಹೇಗಿತ್ತು ಮೊದಲ ದಿನ?

 

 

ಸುದ್ದಿ ಕಣಜ.ಕಾಂ | DISTRICT | EDUCATION COORNER
ಶಿವಮೊಗ್ಗ: ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ 1ರಿಂದ 5ನೇ ತರಗತಿವರೆಗಿನ ಶಾಲೆಗಳು ಸೋಮವಾರದಿಂದ ಆರಂಭಗೊಂಡಿವೆ.
ಸುಮಾರು 19 ತಿಂಗಳುಗಳ ಬಳಿಕ ಶಾಲೆಗಳು ಪುನರಾರಂಭಗೊಂಡಿದ್ದು, ಜಿಲ್ಲೆಯಲ್ಲಿ ಅಂದಾಜು ಶೇ.75ರಷ್ಟು ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದಾರೆ.

ಬಹುತೇಕ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳು ಆಗಮಿಸಿದ್ದು, ಶಿಕ್ಷಕರು ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದರು. ದುರ್ಗಿಗುಡಿ, ಮಲವಗೊಪ್ಪ, ಗಾಡಿಕೊಪ್ಪ, ಆಯನೂರು, ಮಂಡಘಟ್ಟ, ಗೆಜ್ಜೆನಹಳ್ಳಿ ಯಲ್ಲಿರುವ ಶಾಲೆಗಳಿಗೆ ಆಗಮಿಸಿದ ಮಕ್ಕಳಿಗೆ ವಿಶಿಷ್ಟವಾಗಿ ಸ್ವಾಗತಿಸಲಾಯಿತು.

ಮಕ್ಕಳು ಶಾಲಾ ಪ್ರವೇಶಕ್ಕೂ ಮುನ್ನ ಆರತಿ ಬೆಳಗಿ, ಹೂವು ನೀಡಿ ಹಾಗೂ ಚಾಕ್ಲೆಟ್ ಗಳನ್ನು ವಿತರಿಸಿ ಸ್ವಾಗತಿಸಲಾಯಿತು. ಶಾಲೆಗಳಿಗೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಸಚಿವರ ಭೇಟಿ
ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸೋಮವಾರ ಭೇಟಿ ನೀಡಿದರು. ಶಾಲೆಗಳಲ್ಲಿನ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿದರು. ಶಿವಮೊಗ್ಗ ನಗರ ತಾಲೂಕು ಪ್ರದೇಶದ ಸುಮಾರು 6 ಶಾಲೆಗಳಿಗೆ ಸಚಿವರು ಭೇಟಿ ನೀಡಿದ್ದು, ಹೊಸನಗರಕ್ಕೆ ತೆರಳಿದ್ದಾರೆ. ಅಲ್ಲಿಯೂ ಶಾಲೆಗಳ ವೀಕ್ಷಣೆ ಮಾಡಲಿದ್ದಾರೆ.

https://www.suddikanaja.com/2021/08/26/mini-bridge-collapse-people-suffering-to-travel/

error: Content is protected !!