ವಾಹನ ಮಾಲೀಕರಿಗೆ ಶುಭ ಸುದ್ದಿ | ಹೊಸ ವಾಹನ ನೋಂದಣಿಗೆ ಇನ್ಮುಂದೆ ಆರ್.ಟಿ.ಒ ಕಚೇರಿಗೆ ಹೋಗಬೇಕಿಲ್ಲ

 

 

ಸುದ್ದಿ ಕಣಜ.ಕಾಂ | KARNATKA | VEHICLE REGISTRATION
ಶಿವಮೊಗ್ಗ: ಹೊಸದಾಗಿ ವಾಹನ ಖರೀದಿಸುವುದಕ್ಕಿಂತ ಅದರ ನೋಂದಣಿಯೇ ಮಾಲೀಕರಿಗೆ ದೊಡ್ಡ ಸವಾಲಾಗಿತ್ತು. ಹಲವು ಸಲ ಆರ್.ಟಿ.ಒ ಕಚೇರಿಗೆ ಎಡತಾಕಿದರೂ ಪ್ರಯೋಜನವಾಗುತಿರಲಿಲ್ಲ. ಆದರೆ, ಇನ್ಮುಂದೆ ಹೊಸದಾಗಿ ವಾಹನ ಖರೀದಿಸಿದವರು ನೋಂದಣಿಗಾಗಿ ಆರ್.ಟಿ.ಒ ಕಚೇರಿಗೆ ಬರುವ ಅಗತ್ಯವೇ ಇಲ್ಲ!

ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಯ ನಿಯಮಾವಳಿಯಲ್ಲಿ ತಿದ್ದುಪಡಿ ತಂದಿದ್ದು, ಅದರನ್ವಯ ಸಂಪೂರ್ಣವಾಗಿ ನಿರ್ಮಿತವಾಗಿರುವ ವಾಹನಗಳನ್ನು ಪ್ರಥಮ ಬಾರಿಗೆ ನೋಂದಣಿ ಮಾಡಲು ಪರಿವೀಕ್ಷಣೆಗಾಗಿ ನೋಂದಣಿ ಪ್ರಾಧಿಕಾರದ ಮುಂದೆ ಹಾಜರುಪಡಿಸುವ ಅವಶ್ಯಕತೆಯನ್ನು ತೆಗೆದುಹಾಕಲಾಗಿದೆ. ಹೀಗಾಗಿ, ವಾಹನ ಖರೀದಿದಾರರಿಗೆ ದೊಡ್ಡ ತಲೆನೋವೊಂದು ತಪ್ಪಿದೆ.

ಈ ತಿದ್ದುಪಡಿ ನಿಯಮದಂತೆ ಅಧಿಕೃತ ಮಾರಾಟಗಾರರಿಂದ ಖರೀದಿಸಿದ, ಸಂಪೂರ್ಣವಾಗಿ ನಿರ್ಮಿತವಾಗಿರುವ ಮೋಟಾರು ವಾಹನಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಗೆ ಕೊಂಡೊಯ್ಯದೆ ನೋಂದಣಿ ಮಾಡಿಸಿಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ವಾಹನ 4 ಪೋರ್ಟಲ್ ನಲ್ಲಿ ನೋಂದಣಿ

ಅಧಿಕೃತ ಮಾರಾಟಗಾರರಿಂದ ಮಾರಾಟ ಮಾಡಿದ ವಾಹನಗಳ ವಿವರಗಳನ್ನು ವಾಹನ 4 ಪೆÇೀರ್ಟಲ್ ನಲ್ಲಿ ಮಾರಾಟಗಾರರು ನಮೂದಿಸಿ ನೋಂದಣಿಗೆ ತಗಲುವ ತೆರಿಗೆ ಮತ್ತು ಶುಲ್ಕಗಳನ್ನು ಆನ್ಲೈನ್ ಮೂಲಕ ಪಾವತಿಸಬಹುದು. ಅರ್ಜಿಯನ್ನು ಆನ್ಲೈನ್ ಮುಖಾಂತರವೇ ಸಂಬಂಧಪಟ್ಟ ನೋಂದಣಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು.
ಆನ್ಲೈನ್ ನಲ್ಲಿ ಸ್ವೀಕರಿಸಿದಂತಹ ಅರ್ಜಿಗಳನ್ನು ಅಲ್ಲಿಯೇ ಪರಿಶೀಲಿಸಿ, ನೋಂದಣಿ ಪ್ರಾಧಿಕಾರದಿಂದ ಅನುಮೋದನೆ ಮತ್ತು ನೋಂದಣಿ ಕ್ರಮಾಂಕವನ್ನು ನೀಡಲಾಗುತ್ತದೆ. ವಾಹನ ಮಾಲೀಕರು ಅಥವಾ ಸಾರ್ವಜನಿಕರು ಈ ಸೌಲಭ್ಯದ ಉಪಯೋಗ ಪಡೆದುಕೊಳ್ಳಬೇಕು ಎಂದು ಬೆಂಗಳೂರಿನ ಸಾರಿಗೆ ಮತ್ತು ರಸ್ತೆ ಸುರಕ್ಷತೆಯ ಆಯುಕ್ತರು ತಿಳಿಸಿದ್ದಾರೆ.

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

https://www.suddikanaja.com/2021/03/05/no-need-to-visit-rto-office-for-these-18-services/

error: Content is protected !!