JOBS IN KARNATAKA | 12,000 PC, PSI ಹುದ್ದೆಗಳ ನೇಮಕ

 

 

ಸುದ್ದಿ‌‌ ಕಣಜ.ಕಾಂ‌ | KARNATAKA | JOB JUNCTION
ಸಾಗರ(ಶಿವಮೊಗ್ಗ): ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ‌ ಇರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸಾಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖಾಲಿ ಇರುವ 12,000 ಪೊಲೀಸ್ ಕಾನ್ಸ್ ಟೆಬಲ್‌ ಹಾಗೂ ಪೊಲೀಸ್ ಸಬ್ ಇನ್ಸ್ ಪೇಕ್ಟರ್ ನೇಮಕಾತಿ ನಡೆಸಲಾಗುವುದು ಎಂದು ಹೇಳಿದರು. ಈ‌ ಮೂಲಕ ಉದ್ಯೋಗಕ್ಕಾಗಿ ಕಾಯುತ್ತಿರುವ ಲಕ್ಷಾಂತರ‌ ಅಭ್ಯರ್ಥಿಗಳಿಗೆ ಅವಕಾಶ‌ ಸಿಗಲಿದೆ.

Aaraga Jnanendra

READ | ಎಟಿಎಂ‌ ಫ್ರಾಡ್ ತಪ್ಪಿಸಲು SBI ಹೊಸ ಹೆಜ್ಜೆ, ಏನದು, ಗ್ರಾಹರಿಗೇನು ಪ್ರಯೋಜನ, ಇಲ್ಲಿದೆ ಮಾಹಿತಿ…

33,000 ಹುದ್ದೆ ಖಾಲಿ‌ ಇತ್ತು ಈಗ 12,000
4 ವರ್ಷಗಳ ಹಿಂದೆ ಕರ್ನಾಟಕದಲ್ಲಿ‌ 33 ಸಾವಿರ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆ ಖಾಲಿ ಇತ್ತು. ಈಗ 12 ಸಾವಿರ ಹುದ್ದೆಗಳು ಅಷ್ಟೆ ಖಾಲಿ ಇದ್ದು, ಶೀಘ್ರವೇ ಈ ಹುದ್ದೆಗಳ ಜತೆಗೆ ಸಬ್‌‌ ಇನ್ಸ್‌ಪೆಕ್ಟರ್ ಹುದ್ದೆಗಳನ್ನು ನೇಮಕ ಮಾಡಲಾಗುವುದು ಎಂದು ಹೇಳಿದ್ದಾರೆ.
ಪೊಲೀಸ್‌ ಸಿಬ್ಬಂದಿಯ ವಾಸಕ್ಕೆ ಅನಕೂಲವಾಗಬೇಕೆಂದು 100 ಠಾಣಾ ಕಟ್ಟಡ ನಿರ್ಮಾಣ ಮಾಡಲಾಗುವುದು. ₹ 200ಕೋಟಿ ಮೀಸಲುನಿಡಲಾಗಿದೆ ಎಂದರು.

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

https://www.suddikanaja.com/2021/10/10/jobs-in-hindustan-copper-limited-hcl/

error: Content is protected !!