ಮಲೆನಾಡಿನಲ್ಲಿ ಮುಂದುವರಿದ ಅಡಿಕೆ ಕಳ್ಳತನ, ಹಸಿ ಅಡಿಕೆ ಕದ್ದೊಯ್ದ ಕಳ್ಳರು

 

 

ಸುದ್ದಿ ಕಣಜ.ಕಾಂ | KARNATAKA | ARECANUT THEFT
ಶಿವಮೊಗ್ಗ: ಮಾರುಕಟ್ಟೆಯಲ್ಲಿ ಅಡಿಕೆಗೆ ಬಂಪರ್ ಬೆಲೆ ನಿರ್ಧಾರವಾಗಿದ್ದೇ ಮಲೆನಾಡಿನಲ್ಲಿ ಕಳ್ಳರ ಕಾಟ ಶುರುವಾಗಿದೆ. ಜಿಲ್ಲೆಯ ನಾನಾ ಭಾಗಗಳಲ್ಲಿ ದಾಸ್ತಾನು ಮಾಡಿದ ಅಡಿಕೆ ಆದಿಯಾಗಿ ಹಸಿ ಅಡಿಕೆಯನ್ನೂ ಕಳ್ಳರು ಬಿಡುತ್ತಿಲ್ಲ. ಇದರಿಂದಾಗಿ, ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.
2020ರಲ್ಲಿ 12 ಅಡಿಕೆ ಕಳ್ಳತನ ಪ್ರಕರಣ ದಾಖಲಾಗಿದ್ದು, ಅದರಲ್ಲಿ 9 ಅನ್ನು ಪೊಲೀಸರು ಬೇಧಿಸಿದ್ದಾರೆ. 2021ರಲ್ಲಿ 16 ಪ್ರಕರಣಗಳಲ್ಲಿ 10 ಅನ್ನು ಬೇಧಿಸಲಾಗಿದೆ.

ಅಡಿಕೆ ಕಳವಿಗೆ ವಿಮೆ ಸೌಲಭ್ಯ ಸಿಗಲಿ

ಅಡಿಕೆ ಕೊಯ್ಲಿನ ಅವಧಿಯಲ್ಲಿ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಕಳ್ಳತನ ಪ್ರಮಾಣದಲ್ಲಿ ಏರಿಕೆ ಆಗುತ್ತಲೇ ಇದೆ. ಹಲವು ರೋಗ ರುಜಿನೆಗಳ ಸಂಕಷ್ಟ ತಾಳಿಕೊಂಡು ಕೊಯ್ಲು ಮಾಡಿದರೂ ಕಳ್ಳತನದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ. ಹೀಗಾಗಿ, ಅಡಿಕೆ ಕಳ್ಳತನವಾದರೆ ಅದಕ್ಕೂ ವಿಮೆ ಸೌಲಭ್ಯ ನೀಡಬೇಕು ಎನ್ನುವುದು ಬೆಳೆಗಾರರ ಆಗ್ರಹವಾಗಿದೆ.
ಸಿಸಿ ಕ್ಯಾಮೆರಾ ಅಳವಡಿಕೆಗೆ ಪೊಲೀಸ್ ಸಲಹೆ
ಅಡಿಕೆ ತೋಟ ಹಾಗೂ ದಾಸ್ತಾನು ಮಾಡುವ ಜಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡುವಂತೆ ಪೊಲೀಸ್ ಇಲಾಖೆ ಸಲಹೆ ನೀಡಿದೆ. ಇದಕ್ಕಾಗಿ ಬಿತ್ತಿ ಪತ್ರಗಳನ್ನು ಮುದ್ರಿಸಿ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

8 ಕ್ವಿಂಟಾಲ್ ಅಡಿಕೆ ಕಳ್ಳತನ

ಸಾಗರ ತಾಲೂಕಿನ ಅಕ್ಕಿಮನೆ ಗ್ರಾಮದ ವಿಶ್ವನಾಥ್ ಎಂಬುವವರ ತೋಟದಲ್ಲಿ ಅಡಿಕೆ ಮರದಲ್ಲಿದ್ದ ಹಸಿ ಅಡಿಕೆಯನ್ನೇ ಕಳವು ಮಾಡಲಾಗಿದೆ. 18 ಎಕರೆ ಅಡಿಕೆ ತೋಟದಲ್ಲಿ ಸುಮಾರು 25-30 ಮರಗಳಿಂದ ಸುಮಾರು 8 ಕ್ವಿಂಟಾಲ್ ಹಸಿ ಅಡಿಕೆಯನ್ನು ಕಳ್ಳತನ ಮಾಡಲಾಗಿದೆ. ವಿಶ್ವನಾಥ್ ಅವರು ತೋಟಕ್ಕೆ ಹೋದಾಗ ಕಳ್ಳತನ ಆಗಿರುವುದು ಗಮನಕ್ಕೆ ಬಂದಿದ್ದು, ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

https://www.suddikanaja.com/2021/08/26/areca-nut-rate-increase/

error: Content is protected !!