ಶಿವಮೊಗ್ಗದ ಇನ್ನೊಂದು ರಸ್ತೆಗೆ ಪುನೀತ್ ಹೆಸರಿಡಲು ಒತ್ತಾಯ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಹಣಗೆರೆಯ ಮುಖ್ಯ ರಸ್ತೆಯಿಂದ ಕೆರೆಹಳ್ಳಿಗೆ ಹೋಗುವ ರಸ್ತೆಗೆ ನಟ ಪುನೀತ್ ರಾಜಕುಮಾರ್ ಅವರ ಹೆಸರಿಡಬೇಕು ಹಾಗೂ ಹಣಗೆರೆ ಕೆರೆಹಳ್ಳಿ ರಸ್ತೆಯಲ್ಲಿರುವ ಮತ್ತಿಮರದ ವೃತ್ತಕ್ಕೆ ದಾರ್ಶನಿಕ ಸಂತ ನಾರಾಯಣಗುರುಗಳ ನಾಮಕರಣ ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ಈ ಕುರಿತು ಹಣಗೆರೆ ಪಿಡಿಒ ಸಂತೋಷ್ ಹಾಗೂ ಗ್ರಾ.ಪಂ. ಅಧ್ಯಕ್ಷೆ ಯಶೋಧ ಸುರೇಶ್ ಅವರಿಗೆ ನಾರಾಯಣಗುರು ವಿಚಾರ ವೇದಿಕೆ ತೀರ್ಥಹಳ್ಳಿ ತಾಲೂಕು ಘಟಕದ ನಿರ್ದೇಶಕ ಹಾಗೂ ಮಲೆನಾಡು ದೀವರ ಸಾಂಸ್ಕೃತಿಕ ಮತ್ತು ಕ್ಷೇಮಾಭಿವೃದ್ಧಿ ಸಮಿತಿ ನಿರ್ದೇಶಕ ರಮೇಶ್ ಹಣಗೆರೆ ನೇತೃತ್ವದಲ್ಲಿ ಗುರುವಾರ ಮನವಿ ಸಲ್ಲಿಸಲಾಯಿತು.

ಮಂಡಗದ್ದೆ ಹೋಬಳಿ ಘಟಕ ನಾರಾಯಣಗುರು ವಿಚಾರ ವೇದಿಕೆಯ ಹಣಗೆರೆ ಭಾಗದ ಉಪಾಧ್ಯಕ್ಷ ಕೆರೆಹಳ್ಳಿ ಬಂಗಾರಪ್ಪ, ವಿಜಯ್ ಆರ್.ಸೊಗೇದ್, ವಿನಾಯಕ ಯುವಕ ಸಂಘ ಅಧ್ಯಕ್ಷ ಪ್ರಶಾಂತ್ ಬೇಸೂರ್, ಗ್ರಾಮದ ಯುವಕರಾದ ಪುರುಶೋತ್ತಮ, ಭರತ್, ಶರತ್, ವಿನಯ್, ವಿಘ್ನೇಶ್, ಸುದೀಪ್, ದರ್ಶನ್ ಉಮೇಶ್, ಪುನೀತ್ ಅಭಿಮಾನಿಗಳು ಉಪಸ್ಥಿತರಿದ್ದರು.

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್.  ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

https://www.suddikanaja.com/2021/11/01/cannel-road-named-as-puneeth-rajakumar/

error: Content is protected !!