ಲಕ್ಷ್ಮಿ ಪೂಜೆಗೆ ಹೋದಾಗ ಮನೆಯಲ್ಲಿಯ ಲಕ್ಷ್ಮಿಯೇ ಮಾಯ

 

 

ಸುದ್ದಿ ಕಣಜ.ಕಾಂ
ರಿಪ್ಪನ್’ಪೇಟೆ (ಹೊಸನಗರ): ಹೊಸನಗರ ತಾಲೂಕಿನ ರಿಪ್ಪನ್’ಪೇಟೆಯಲ್ಲಿ ಕಳೆದ ಕೆಲವು ದಿನಗಳಿಂದ ಸರಣಿ ಕಳ್ಳತನ ನಡೆಯುತ್ತಿವೆ. ಮನೆಯಲ್ಲಿ ಯಾರೂ ಇಲ್ಲದ್ದರ ಸಮಯ ಸಾಧಿಸಿ ಅಂತಹ ಮನೆಗಳನ್ನೇ ಕಳ್ಳರು ಟಾರ್ಗೆಟ್ ಮಾಡಲಾಗುತ್ತಿದೆ.
ಶನಿವಾರ ರಾತ್ರಿ ಕೂಡ ಗವಟೂರಿನ ಹುಳಿಗದ್ದೆ ಎಂಬ ಗ್ರಾಮದಲ್ಲಿ ಇಂತಹದ್ದೇ ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ್ದಕ್ಕೆ ಖದೀಮರು ಮನೆಯೊಳಗೆ ಹೊಕ್ಕಿ 9 ಸಾವಿ ರೂ. ನಗದು ಸೇರಿ ಅಂದಾಜು 1.34 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.
* ಆಗಿದ್ದೇನು?: ಶಿವಕುಮಾರ್ ಎಂಬುವವರು ಅಂಗಡಿಯಲ್ಲಿದ್ದ ಲಕ್ಷಿö್ಮ ಪೂಜೆಗೆಂದು ಹೋದಾಗ ಘಟನೆ ನಡೆದಿದೆ. ಮನೆಯ ಚಾವಣಿ ಮೂಲಕ ಇಳಿದು ಕಳ್ಳತನ ಮಾಡಿದ್ದಾರೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!