ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ನಗರದ ಅರಸ್ ವೆಜ್ ಹೋಟೆಲ್ ಬಳಿ ಕಳ್ಳತನ ಮಾಡಿ ತಂದಿದ್ದ ಮೊಬೈಲ್’ಗಳನ್ನು ಮಾರಾಟ ಮಾಡಿದ್ದಾಗ ರೆಡ್ ಹ್ಯಾಂಡ್ ಆಗಿ ಇಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆರ್.ಎಂ.ಎಲ್ ನಗರದ ಜುನೈದ್ ಶೇಖ್ ಅಲಿಯಾಸ್ ಮಹಮ್ಮದ್ ಜುನೈದ್(19), ಮೇಲಿನ ತುಂಗಾನಗರ ಮಹಮ್ಮದ್ ಖಲಂದರ್ (19) ಬಂಧಿತ ಆರೋಪಿಗಳು.
ಖಚಿತ ಮಾಹಿತಿಯ ಮೇರೆಗೆ ದಾಳಿ
ಬುಧವಾರ ಬೆಳಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆ ಪಿಎಸ್.ಐ ಮತ್ತು ಸಿಬ್ಬಂದಿ ಠಾಣೆ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ ಯಾರೋ ಇಬ್ಬರು ಅರಸ್ ವೆಜ್ ಹೋಟೆಲ್ ಹತ್ತಿರ ಕಳ್ಳತನ ಮಾಡಿ ತಂದ ಮೊಬೈಲ್’ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿ ಮೊಬೈಲ್ ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.
READ | ಶಿವಮೊಗ್ಗದಲ್ಲಿ ಪೊಲೀಸರ ಹೈಅಲರ್ಟ್, ತಲ್ವಾರ್ ಸೇರಿ ಮಾರಕಾಸ್ತ್ರಗಳು ಸೀಜ್
ಪರ ಜಿಲ್ಲೆಯಲ್ಲಿ ಕಳ್ಳತನ
ವಿಚಾರಣೆ ಮಾಡಿದಾಗ ಕಡೂರು ಸಂತೆ ಮಾರ್ಕೆಟ್ ಜನ ಸಂದಣಿ ಪ್ರದೇಶಗಳಲ್ಲಿ ಮೊಬೈಲ್ ಫೋನ್ ಗಳನ್ನು ಕಳ್ಳತನ ಮಾಡಿಕೊಂಡು ತಂದಿರುವುದಾಗಿ ತಿಳಿಸಿದ್ದಾರೆ.
ಆರೋಪಿಗಳ ಬಳಿಯಿಂದ ಅಂದಾಜು 45,000 ರೂಪಾಯಿ ಮೌಲ್ಯದ ವಿವಿಧ ಕಂಪನಿಯ 9 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಇವರ ವಿರುದ್ಧ ಕಲಂ 41 (ಡಿ), 102 ಸಿಆರ್.ಪಿಸಿ, 379 ಐಪಿಸಿ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://suddikanaja.com/2021/12/17/various-company-mobile-seized-by-police/