ಹೋರಿ ತಿವಿದು ಶಿವಮೊಗ್ಗದಲ್ಲಿ ಮೂವರಿಗೆ ಗಾಯ, ಆಸ್ಪತ್ರೆಗೆ ದಾಖಲು

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಜಿಲ್ಲೆಯಾದ್ಯಂತ ಹೋರಿ ಹಬ್ಬವನ್ನು ಆಯೋಜಿಸಲಾಗುತ್ತಿದ್ದು, ವಿವಿಧೆಡೆ ಹೋರಿ ತಿವಿದು ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.

FOLLOW US copyತೊಗರ್ಸಿಯ ವಿನಾಯಕ್, ಇಬ್ರಾಹಿಂ ಹಾಗೂ ಮಹೇಶಪ್ಪ ಎಂಬುವವರು ಗಾಯಗೊಂಡಿದ್ದಾರೆ. ಶಿಕಾರಿಪುರ ತಾಲೂಕಿನ ಕೊರಟಿಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಹಟ್ಟಿ ಹಬ್ಬ ವೀಕ್ಷಿಸುವುದಕ್ಕಾಗಿ ಬಂದಾಗ ಜನರ ಮಧ್ಯೆ ಇದ್ದ ವಿನಾಯಕ್ ಮತ್ತು ಇಬ್ರಾಹಿಂ ಎಂಬುವವರಿಗೆ ಹೋರಿಯು ಕೊಂಬಿನಿಂದ ತಿವಿದಿದೆ.
ಶಿವಮೊಗ್ಗದ ಹರಮಘಟ್ಟದಲ್ಲಿ ಮಹೇಶಪ್ಪ ಎಂಬುವವನಿಗೆ ಹೋರಿಯು ತಿವಿದಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

error: Content is protected !!