ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಂದ ಪ್ರತಿಭಟನೆ, ಸಾರಿಗೆ ಸಂಸ್ಥೆ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ, ಕಾರಣವೇನು?

 

 

ಸುದ್ದಿ‌ ಕಣಜ.ಕಾಂ | KARNATAKA | KSRTC
ಶಿವಮೊಗ್ಗ: ಶಿವಮೊಗ್ಗದಿಂದ ಕಲಬುರಗಿಗೆ ಹೊರಟ ಬಸ್ ಚನ್ನಗಿರಿ ಬಳಿ‌ ಕೆಟ್ಟು ನಿಂತಿದ್ದು, ಪ್ರಯಾಣಿಕರು NEKRTC ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

FOLLOW US copy
ಪ್ರಯಾಣಿಕರು ಹೇಳುವಂತೆ, ಬಸ್ ಸುಮಾರು ಎರಡೂವರೆ ಗಂಟೆಗಳ‌ ಕಾಲ‌ ಕೆಟ್ಟು ನಿಂತಿದ್ದು, ಧಾರಾಕಾರ ಮಳೆಯ ನಡುವೆಯೇ ಜನರು ಪರದಾಡಿದ್ದಾರೆ.
ಚನ್ನಗಿರಿಯಿಂದ ಶಿವಮೊಗ್ಗಕ್ಕೆ ವಾಪಸ್!
ಕಲಬುರಗಿಗೆ ಹೋಗಬೇಕಿದ್ದ ನಾನ್ ಏಸಿ ಸ್ಲೀಪರ್ ಬಸ್ ತಾಂತ್ರಿಕ ದೋಷದಿಂದಾಗಿ ಚನ್ನಗಿರಿ ಬಳಿ‌‌ ಕೆಟ್ಟು ನಿಂತಿದೆ. ತಾತ್ಕಾಲಿಕವಾಗಿ ರಿಪೇರಿ ಮಾಡಿ ಶಿವಮೊಗ್ಗ ಡಿಪೋಗೆ ವಾಪಸ್ ಬರಲಾಗಿದೆ. ಬದಲಿ‌ಬಸ್ ವ್ಯವಸ್ಥೆ ಮಾಡುವಂತೆ ಪ್ರಯಾಣಿಕರು ಪ್ರತಿಭಟನೆ ಮಾಡಿದ್ದಾರೆ.

kalaburagi bus
ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಕೆಟ್ಟು ನಿಂತಿರುವ ಬಸ್.

ಡಿಪೋ ಮ್ಯಾನೇಜರ್ ಬದಲಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಸ್ಲೀಪಿಂಗ್ ಕೋಚ್ ಬದಲು ನಾನ್ ಸ್ಲೀಪಿಂಗ್ ಬಸ್ ಕಲ್ಪಿಸುವುದಾಗಿ ಹೇಳಿದ್ದಾರೆ. ದುಬಾರಿ ಹಣ ಪಾವತಿಸಿ ನಾನ್ ಸ್ಲೀಪಿಂಗ್ ನಲ್ಲಿ ಹೋಗಲಾಗದು ಎಂದು ಪಟ್ಟು ಹಿಡಿದಿದ್ದಾರೆ. ಸುಮಾರು ಹೊತ್ತು ನಡೆದ ವಾಗ್ವಾದ ಬಳಿಕ ಬಸ್ ನೀಡುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

READ | ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಮಾರುಕಟ್ಟೆಗೆ ಬರಲಿದೆ `ಅಡಿಕೆ ಸಿಪ್ಪೆ’ಯಿಂದ ತಯಾರಿಸಿದ ಶ್ಯಾಂಪೂ

ಪ್ರಯಾಣಿಕರ ಆರೋಪ ಹಾಗೂ ಬೇಡಿಕೆಗಳೇನು?

  • ಸುಮಾರು ವರ್ಷಗಳಿಂದ ಹಳೇ ಬಸ್ ಅನ್ನೇ ಶಿವಮೊಗ್ಗ-ಕಲಬುರಗಿ ಮಾರ್ಗಕ್ಕೆ ಓಡಿಸಲಾಗುತ್ತಿದೆ. ಹೀಗಾಗಿ, ಈ ಬಸ್ಸಿನಲ್ಲಿ ಒಂದಿಲ್ಲೊಂದು ಸಮಸ್ಯೆ ಆಗುತ್ತಲೇ ಇರುತ್ತದೆ.
  • ಪ್ರಯಾಣಕ್ಕಾಗಿ ಸಾವಿರಾರು ರೂಪಾಯಿ ಪಡೆಯಲಾಗುತ್ತಿದೆ. ಆದರೆ, ಅದಕ್ಕೆ ತಕ್ಕ ವ್ಯವಸ್ಥೆ ಬಸ್ಸಿನಲ್ಲಿಲ್ಲ. ಕೂಡಲೇ ಈ ಮಾರ್ಗಕ್ಕೆ ಹೊಸ ಬಸ್ ವ್ಯವಸ್ಥೆ ಕಲ್ಪಿಸಬೇಕು.

https://www.suddikanaja.com/2021/09/21/shivamogga-railway-station/

error: Content is protected !!