ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಡಿಗ್ರಿ ಪಾಸಾದವರಿಗೆ ಉದ್ಯೋಗ ಅವಕಾಶ, ಅರ್ಜಿ ಸಲ್ಲಿಕೆಗೆ ಒಂದು ದಿನ ಬಾಕಿ, ₹27,000ವರೆಗೆ ಸಂಬಳ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಕೇಂದ್ರ ಸರ್ಕಾರದ ಟೆಕ್ಸ್ ಟೈಲ್ ಕ್ಷೇತ್ರದಲ್ಲಿ ಸಾಮಥ್ರ್ಯ ವೃದ್ಧಿ ಯೋಜನೆ ಅಡಿ ಟ್ರೈನರ್ ಮತ್ತು ಟ್ರೈನಿಂಗ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನೇಮಕಾತಿಯು ಸಂದರ್ಶನದ ಮೂಲಕ ನಡೆಯಲಿದ್ದು, ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ ಪಡೆದವರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

FOLLOW US copyಟ್ರೈನರ್ (30 ಹುದ್ದೆ) (ಎನ್.ಎಸ್.ಕ್ಯೂ.ಎಫ್ ಲೆವಲ್ 1 ಮತ್ತು 2 ಕೋರ್ಸ್) | ಅರ್ಜಿ ಸಲ್ಲಿಸುವವರು ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು ಜೊತೆಗೆ 8 ವರ್ಷಗಳ ಅನುಭವ ಹೊಂದಿರಬೇಕು. ಅಥವಾ 12ನೇ ಪಾಸಾಗಿದ್ದು 7 ವರ್ಷ ಅನುಭವ ಹೊಂದಿರಬೇಕು / ಐಟಿಐ ಪಾಸಾಗಿದ್ದು 5 ವರ್ಷ ಅನುಭವ ಇಲ್ಲವೇ ಡಿಪ್ಲೋಮಾ ಇನ್ ಎಂಜಿನಿಯರಿಂಗ್/ ಸೈನ್ಸ್ ನಲ್ಲಿ ಪದವಿ ಪಡೆದಿದ್ದು ಮೂವರು ವರ್ಷ ಅನುಭವ ಇರಬೇಕು. ಅಥವಾ ಎಂಜಿನಿಯರಿಂಗ್ ನಲ್ಲಿ ಪದವಿ ಜೊತೆ ಒಂದು ವರ್ಷದ ಅನುಭವ ಇರತಕ್ಕದ್ದು.

ಎನ್.ಎಸ್.ಕ್ಯೂ.ಎಫ್ ಲೆವಲ್ 3, 4 ಕೋರ್ಸ್ ಗಳಿಗೆ ಐಟಿಐ ಮತ್ತು 3 ವರ್ಷ ಅನುಭವ/ ಡಿಪ್ಲೊಮಾ ಇನ್ ಎಂಜಿನಿಯರಿಂಗ್/ ವಿಜ್ಞಾನದಲ್ಲಿ ಪದವಿ ಜೊತೆಗೆ 5 ವರ್ಷ ಅನುಭವ/ ಎಂಜಿನಿಯರಿಂಗ್ ಪದವಿ ಜತೆ 2 ವರ್ಷ ಅನುಭವ.

ಟ್ರೈನಿಂಗ್ ಅಸಿಸ್ಟೆಂಟ್ (30 ಹುದ್ದೆ) | ಎಸ್ಸೆಸ್ಸೆಲ್ಸಿ ಮತ್ತು 5 ವರ್ಷ ಕೆಲಸದ ಅನುಭವ, 12ನೇ ತರಗತಿ ಮತ್ತು 3 ವರ್ಷ ಅನುಭವ/ ಐಟಿಐ ಮತ್ತು 1 ವರ್ಷದ ಅನುಭವ ಇರಬೇಕು.
ಅರ್ಜಿ ಸಲ್ಲಿಸಲು ವಯೋಮಿತಿ, ಸಂಬಳ
35 ವರ್ಷ ವಯೋಮಿತಿ (ಎಸ್ಸಿ, ಎಸ್ಟಿ ಮತ್ತು ಮಹಿಳಾ ಅಭ್ಯರ್ಥಿಗೆ 5 ವರ್ಷ ಸಡಿಲಿಕೆ) ನಿಗದಿಪಡಿಸಲಾಗಿದೆ. ಟ್ರೈನರ್ ಹುದ್ದೆಗೆ 18,000 ರೂಪಾಯಿಯಿಂದ 27,000 ರೂ. ಹಾಗೂ ಟ್ರೈನಿಂಗ್ ಅಸಿಸ್ಟೆಂಟ್ ಗೆ 5000 ರೂ.ದಿಂದ 14,750 ರೂ.ವರೆಗೆ ಸಂಬಳ ನೀಡಲಾಗುವುದು.

READ | ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಮಾರುಕಟ್ಟೆಗೆ ಬರಲಿದೆ `ಅಡಿಕೆ ಸಿಪ್ಪೆ’ಯಿಂದ ತಯಾರಿಸಿದ ಶ್ಯಾಂಪೂ

ಅರ್ಜಿ ಸಲ್ಲಿಸಲು ಕೊನೆ ದಿನ
ನವೆಂಬರ್ 17ರ ಸಂಜೆ 6 ಗಂಟೆಯೊಳಗೆ ಅರ್ಜಿಗಳನ್ನು ಸಲ್ಲಿಸಬಹುದು. ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅದರೊಂದಿಗೆ ಎಲ್ಲ ಪೂರಕ ದಾಖಲಾತಿಗಳೊಂದಿಗೆ training.csb@nic.in / rond.csb@nic.in ಇಮೇಲ್ ಮಾಡಬಹುದು.

NOTIFICATION and APPLICATION

https://www.suddikanaja.com/2021/09/20/jobs-in-shivamogga-for-sslc-and-commerce-passed-candidates/

error: Content is protected !!