ಭದ್ರಾವತಿಯ ಈ‌ ಗ್ರಾಮ ಸೀಲ್ ಡೌನ್, ಅಗತ್ಯ ವಸ್ತು ಖರೀದಿಗೆ ಕಾಲ ಮಿತಿ

 

 

ಸುದ್ದಿ‌ ಕಣಜ.ಕಾಂ
ಭದ್ರಾವತಿ: ದಿನೇ ದಿನೆ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗುತಿದ್ದು, ಸೋಂಕಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಕೂಡ್ಲಿಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧೆಡೆ ಸೀಲ್ ಡೌನ್ ಮಾಡಲಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಯಾನಿಟೈಸ್ ಮಾಡಲಾಗಿದ್ದು, ಸಾರ್ವಜನಿಕರಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

READ | ಕೊರೊನಾದಿಂದ ಮೃತಪಟ್ಟವನ ಕೊನೆಯ ಸಲ ಮುಖ ನೋಡಲು ಹೋದಾಗ ಕುಟುಂಬದವರಿಗೆ ಕಾದಿತ್ತು ಶಾಕ್! ಆಗಿದ್ದೇನು ಗೊತ್ತಾ?

ಬೆಳಗ್ಗೆ 8 ಗಂಟೆವರೆಗೆ ಕಾಲಾವಕಾಶ | ಗ್ರಾಪಂ‌ ವ್ಯಾಪ್ತಿಯಲ್ಲಿ ಐದಕ್ಕೂ ಅಧಿಕ ಪ್ರಕರಣಗಳು ಪತ್ತೆಯಾದರೆ ಆ ಪ್ರದೇಶವನ್ನು ಸೀಲ್ ಡೌನ್ ಮಾಡುವಂತೆ ಸರ್ಕಾರ ನಿರ್ದೇಶನ ನೀಡಿದೆ. ಅದರ ಬೆನ್ನಲ್ಲೇ ಟಾಸ್ಕ್ ಫೋರ್ಸ್ ಸಭೆ ನಡೆಸಿ ಸೀಲ್ ಡೌನ್ ನಿರ್ಧಾರ ಕೈಗೊಂಡಿದ್ದು, ಬೆಳಗ್ಗೆ 5 ರಿಂದ 8 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಕಾಲಾವಕಾಶ ನೀಡಿದೆ. ಒಂದುವೇಳೆ, ಅನಗತ್ಯವಾಗಿ ಓಡಾಡುವುದು ಕಂಡುಬಂದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

error: Content is protected !!