ಅಂಗಡಿಯಲ್ಲಿ ಸಾಮಗ್ರಿ ಇಲ್ಲವೆಂದಿದ್ದಕ್ಕೆ ಮಾಲೀಕನ ಮೇಲೆಯೇ ಹಲ್ಲೆ

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಅಂಗಡಿಯೊಂದರಲ್ಲಿ ಕೇಳಿದ ಸಾಮಗ್ರಿ ಇಲ್ಲ ಎಂದು ಹೇಳಿದ್ದಕ್ಕೆ ಮಾಲೀಕನ ಮೇಲೆಯೇ ಹಲ್ಲೆ ಮಾಡಿರುವ ಘಟನೆ ಮಿಳಘಟ್ಟದಲ್ಲಿ ಬುಧವಾರ ಸಂಭವಿಸಿದೆ.

ಪದ ಕಣಜ‌ 13 | ಕೊರೊನಾ ಟೈಂನಲ್ಲಿ ಕಾಮನ್ ಆದರೂ ‘ಕರ್ಫ್ಯೂ’ಗೆ ಇರುವ ಇತಿಹಾಸವೇನು ಗೊತ್ತಾ?

follow us in link tree

ಅಂಗಡಿ ಮಾಲೀಕ ಭೀಮಾನಂದ್ ಎಂಬುವವರ ಮೇಲೆ ಹಲ್ಲೆ ಮಾಡಲಾಗಿದೆ. ಮಿಳಘಟ್ಟ ನಿವಾಸಿ ಶಹಬಾಜ್ ಹಾಗೂ ಆತನ ಸ್ನೇಹಿತರು ಅಂಗಡಿಗೆ ಬಂದಿದ್ದು ಸಾಮಗ್ರಿಯನ್ನು ಕೇಳಿದ್ದಾರೆ. ಇಲ್ಲವೆಂದು ಹೇಳಿದ್ದಕ್ಕೆ `ಏನು ಕೇಳಿದ್ದರು ಇಲ್ಲವೆಂದೇ ಉತ್ತರಿಸುತ್ತೀರಿ’ ಎಂದು ಕೆಂಡಾಮಂಡಲಗೊಂಡು ಹಲ್ಲೆ ಮಾಡಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

error: Content is protected !!