ಪದ ಕಣಜ-14 | ‘ಹ್ಯಾಟ್ರಿಕ್’ ಪದ ಹುಟ್ಟಿಕೊಂಡಿದ್ದು ಹೇಗೆ, ಇದರ ಹಿಂದಿದೆ ಇತಿಹಾಸ

 

 

ಸುದ್ದಿ ಕಣಜ.ಕಾಂ | KARNATAKA | PADA KANAJA
ಈ ಮುಂಚೆ ಕ್ರಿಕೆಟ್ ಗಷ್ಟೇ ಸೀಮಿತವಾಗಿದ್ದ `ಹ್ಯಾಟ್ರಿಕ್’ ಶಬ್ದ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ…
ಇತ್ತೀಚೆಗೆ ಸಿನಿಮಾ ಸೇರಿದಂತೆ ನಾನಾ ಕ್ಷೇತ್ರಗಳಿಗೂ ಈ ಶಬ್ದ ಲಗ್ಗೆ ಇಟ್ಟಿದೆ. ಆದರೆ, ಇದರ ಮೂಲ ತಿಳಿದುಕೊಳ್ಳಲು ಹೊರಟರೆ ಆಸಕ್ತಿಕರ ಅಂಶಗಳು ಗೊತ್ತಾಗುತ್ತವೆ.

follow us in link treeಪದ ಕಣಜ‌ 13 | ಕೊರೊನಾ ಟೈಂನಲ್ಲಿ ಕಾಮನ್ ಆದರೂ ‘ಕರ್ಫ್ಯೂ’ಗೆ ಇರುವ ಇತಿಹಾಸವೇನು ಗೊತ್ತಾ?

ಹ್ಯಾಟ್ರಿಕ್ ಶಬ್ದ ಹುಟ್ಟಿದ್ದು ಹೀಗೆ

ಒಂದಾದ ಮೇಲೆ ಒಂದರಂತೆ ಮೂರು ಸಲ ಚೆಂಡರನ್ನು ಚಾಲು ಮಾಡಿ ಸತತವಾಗಿ ಮೂರು ಜನರನ್ನು ಆಟದಿಂದ ಹೊರಕ್ಕೆ ಕಳುಹಿಸುವುದಕ್ಕೆ ಈ ಹೆಸರಿದೆ.
`ಹ್ಯಾಟ್’ ಎಂದರೆ, ಹಿಂದೆ ಇಂತಹ ಕಷ್ಟಕರವಾದ ರೀತಿಯಲ್ಲಿ ಮೂರು ಜನರನ್ನು ಹೊರ ಹಾಕಿದವನಿಗೆ ಒಂದು ಹ್ಯಾಟ್ (ಟೋಪಿ) ಬಹುಮಾನವಾಗಿ ನೀಡುವ ಪದ್ಧತಿ ಇತ್ತು. ಆ ಹ್ಯಾಟ್ ಅನ್ನು ಸಂಪಾದನೆ ಮಾಡುವ `ಟ್ರಿಕ್’ ಅದು. ಈಗ ಈ ಪದ್ಧತಿ ನಿಂತುಹೋಗಿದೆ. ಆದರೆ, ಶಬ್ದ ಮಾತ್ರ ವ್ಯಾಪಕವಾಗಿ ಬಳಸಲಾಗುತ್ತಿದೆ.

https://www.suddikanaja.com/2021/11/08/bata-marga-word-meaning/

error: Content is protected !!