ರಾಜ್ಯದಲ್ಲೇ ಅತಿ ಹೆಚ್ಚು ಮಳೆಯಾಗಿದ್ದು ಭದ್ರಾವತಿಯಲ್ಲಿ, ಶಿವಮೊಗ್ಗದಲ್ಲಿ ಆರೆಂಜ್ ಅಲರ್ಟ್

 

 

ಸುದ್ದಿ ಕಣಜ.ಕಾಂ | DISTRICT | RAIN FALL
ಶಿವಮೊಗ್ಗ: ವಾಯುಭಾರ ಕುಸಿತದಿಂದಾಗಿ ರಾಜ್ಯದಾದ್ಯಂತ ಭರ್ಜರಿ ಮಳೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಭದ್ರಾವತಿಯಲ್ಲಿ ಅತಿ ಹೆಚ್ಚು ಮಳೆಯಾಗಿರುವುದು ದಾಖಲಾಗಿದೆ.

follow us in link treeಕರ್ನಾಟಕ ರಾಜ್ಯ ವಿಪತ್ತು ನಿರ್ವಹಣ ಕೇಂದ್ರ (ಕೆಎಸ್.ಎನ್.ಡಿ.ಎಂಸಿ) ವರದಿ ಪ್ರಕಾರ, ರಾಜ್ಯದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ 139 ಎಂಎಂ, ರಾಮದುರ್ಗ ತಾಲೂಕಿನ ಬಿಡಕಿಯಲ್ಲಿ 112.5 ಎಂಎಂ ಹಾಗೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ 106 ಎಂಎಂ ಮಳೆಯಾಗಿದೆ. ರಾಜ್ಯದಲ್ಲೇ ಮೂರನೇ ಅತಿ ಹೆಚ್ಚು ಮಳೆಯಾದ ತಾಲೂಕು ಇದಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್

ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು, ನವೆಂಬರ್ 19ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಭಾರಿ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರನ್ವಯ, ಶುಕ್ರವಾರ ಬೆಳಗ್ಗೆಯಿಂದ ಜಿಟಿ ಮಳೆಯಾಗುತ್ತಿದೆ. ಜಿಲ್ಲೆಯ ಹೊಸನಗರ, ಸಾಗರ, ತೀರ್ಥಹಳ್ಳಿ, ಸೊರಬ, ಶಿಕಾರಿಪುರ, ಭದ್ರಾವತಿ, ಶಿವಮೊಗ್ಗ ಎಲ್ಲೆಡೆ ಮಳೆ ಸುರಿಯುತ್ತಿದೆ. ಇಡೀ ರಾತ್ರಿ ವರ್ಷಧಾರೆಯಾಗಿದೆ.
ಯಾವ ತಾಲೂಕಿನಲ್ಲಿ ಎಷ್ಟು ಮಳೆ
ಶುಕ್ರವಾರ ಬೆಳಗ್ಗೆಯವರೆಗೆ ಶಿವಮೊಗ್ಗದಲ್ಲಿ 9.2 ಎಂಎಂ, ಭದ್ರಾವತಿ 16.4 ಎಂಎಂ, ತೀರ್ಥಹಳ್ಳಿ 3.6 ಎಂಎಂ, ಸಾಗರ 2.6 ಎಂಎಂ, ಶಿಕಾರಿಪುರ 8.0 ಎಂಎಂ, ಸೊರಬ 3.4 ಎಂಎಂ, ಹೊಸನಗರ 99.6 ಎಂಎಂ ಮಳೆ ಸುರಿದಿದೆ.

https://www.suddikanaja.com/2021/06/18/highest-rainfall-in-hosanagara/

error: Content is protected !!